

ಉಪ್ಪಿನಂಗಡಿ: ಹಿಂದು ಸಮಾಜದ ಶ್ರದ್ಧಾಕೇಂದ್ರ, ಸಮಾಜದ ಸರ್ವಾಂಗೀಣ ಉನ್ನತಿಗಾಗಿ ಶ್ರಮಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರೃ ಹಾನಿಗೊಳಿಸುವ ಷಡ್ಯಂತ್ರದ ಪ್ರಯತ್ನಗಳ ನಡುವೆ ಕ್ಷೇತ್ರದ ಪಾವಿತ್ರ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಸೋಮವಾರ ರಾತ್ರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಸಹಸ್ರಲಿಂಗೇಶ್ವರ ಮತ್ತು ಮಹಾಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಭಕ್ತರು ಬಳಿಕ ಪ್ರಕೃತಿಯ ಆರಾಧನೆ ನೆಲೆಯಲ್ಲಿ 51 ಹಣತೆಗಳನ್ನು ಬೆಳಗಿಸಿ ನದಿ ಸಂಗಮ ಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹಣತೆಗಳನ್ನು ಸಮರ್ಪಿಸಲಾಯಿತು.
ಪ್ರಮುಖರಾದ ಕರುಣಾಕರ ಸುವರ್ಣ, ಧನ್ಯ ಕುಮಾರ್ ರೈ, ಕಂಗ್ವೆ ವಿಶ್ವನಾಥ ಶೆಟ್ಟಿ, ಎನ್.ಉಮೇಶ್ ಶೆಣೈ, ಹರಿರಾಮಚಂದ್ರ, ಲೋಕೇಶ್ ಬೆತ್ತೋಡಿ, ಉಷಾ ಆಚಾರ್ಯ, ಧನಂಜಯ್ ನಟ್ಟಿಬೈಲು, ಸುರೇಶ್ ಅತ್ರಮಜಲು, ಅಂಬಾಪ್ರಸಾದ್ ಪಾತಾಳ, ವಿದ್ಯಾಧರ ಜೈನ್, ಹೇರಂಭ ಶಾಸ್ತ್ರಿ, ಶ್ರೀರಾಮ ಪಾತಾಳ, ಹೊನ್ನಪ್ಪ ವರೆಕ್ಕಾ, ಮಹೇಂದ್ರ ವರ್ಮ ಪಡ್ಪು, ಸುನೀಲ್ ಅನಾವು, ಚಂದ್ರಶೇಖರ್ ಮಡಿವಾಳ, ಕೈಲಾರ್ ರಾಜಗೋಪಾಲ ಭಟ್, ಜಯಂತ ಪೊರೋಳಿ, ಉಷಾಚಂದ್ರ ಮುಳಿಯ, ಪ್ರಸಾದ್ ಭಂಡಾರಿ, ಲೋಕೇಶ್ ಜೈನ್ ಮತ್ತಿತರರು ಭಾಗವಹಿಸಿದ್ದರು.