ಹರಿಪಾದ ಸೇರಿದ ಪ್ರಯಾಗ ಮಠದ ಸ್ವಾಮೀಜಿ

Udupi - Prayag-Swamiji
Published on

ಉಡುಪಿ: ಪಲಿಮಾರು ಮಠದ ಶಾಖೆ ಪ್ರಯಾಗ ಮಧ್ವ ಮಠದ ಶ್ರೀ ವಿದ್ಯಾತ್ಮ ತೀರ್ಥ ಸ್ವಾಮೀಜಿ (94) ಶುಕ್ರವಾರ ಹರಿಪಾದ ಸೇರಿದ್ದಾರೆ.

ಇವರ ಪೂರ್ವಾಶ್ರಮದ ಹೆಸರು ವಾದಿರಾಜ ಪಂಚಮುಖಿ. ವಿಶ್ವ ಹಿಂದೂ ಪರಿಷತ್ ಸಕ್ರಿಯ ಪದಾಧಿಕಾರಿಯಾಗಿದ್ದ ಧಾರವಾಡ ಮೂಲದ ಶ್ರೀಗಳು, 2004ರಲ್ಲಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಉಡುಪಿಯಲ್ಲಿ ಸಂನ್ಯಾಸಾಶ್ರಮ ಸ್ವೀಕರಿಸಿ, ಉತ್ತರ ಭಾರತದಲ್ಲಿ ಮಧ್ವಾಚಾರ್ಯರ ತತ್ವಪ್ರಚಾರ ಮಾಡುತ್ತಿದ್ದರು. ಹಿಂದಿ ಭಾಷೆಯಲ್ಲಿ ಮಾಧ್ವಸಿದ್ಧಾಂತದ ಅನೇಕ ಗ್ರಂಥಗಳನ್ನು ಅನುವಾದಿಸಿದ್ದರು.

ಪೇಜಾವರ ಶ್ರೀ ಸಂತಾಪ
ಶ್ರೀ ವಿದ್ಯಾತ್ಮ ತೀರ್ಥ ಶ್ರೀಪಾದರು ನಮ್ಮ ಗುರುಗಳಾದ ವಿಶ್ವೇಶ ತೀರ್ಥರು ಹಿಂದು ಸಮಾಜದ ಅಭ್ಯುದಯಕ್ಕಾಗಿ ಕೈಗೊಳ್ಳುತ್ತಿದ್ದ ಅನೇಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. 2004ರಲ್ಲಿ ಉಡುಪಿಯಲ್ಲಿ ನಡೆದ ವಿರಾಟ್ ಹಿಂದು ಸಮಾಜೋತ್ಸವ ಮತ್ತು 2018ರಲ್ಲಿ ನಡೆದ ಧರ್ಮಸಂಸತ್‌ನಲ್ಲಿಯೂ ವಿಶೇಷ ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಕೃಷ್ಣ ಪರಮಾತ್ಮನು ಅವರಿಗೆ ಸದ್ಗತಿಯನ್ನು ಕರುಣಿಸಲೆಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪ್ರಾರ್ಥಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net