ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಮೆರವಣಿಗೆ

08-GPT-3
ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಮೆರವಣಿಗೆ ಮಾಡಲಾಯಿತು.
Published on

ಗುಂಡ್ಲುಪೇಟೆ: ಯುಗಾದಿ ಕಳೆದು ತಿಂಗಳಾದರೂ ಮಳೆ ಬೀಳದ ಹಿನ್ನೆಲೆಯಲ್ಲಿ ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ಕಪ್ಪೆ ಮೆರವಣಿಗೆ ಮಾಡಲಾಯಿತು.

ಚಿಕ್ಕಕೆರೆಯಲ್ಲಿ ಹಿಡಿದ ಕಪ್ಪೆಯನ್ನು ಬಿದಿರಿನ ಬಂಬಿಗೆ ಕಟ್ಟಿ ಬಾಲಕರು ಹೆಗಲ ಮೇಲೆ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಪ್ರತಿ ಮನೆಯವರೂ ಹುಡುಗರು ಹಾಗೂ ಕಪ್ಪೆಯ ಮೇಲೆ ನೀರು ಹಾಕಿ ಧವಸಧಾನ್ಯ, ನಾಣ್ಯಗಳನ್ನು ಕಾಣಿಕೆಯಾಗಿ ನೀಡಿ ಮಳೆಗಾಗಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net