ಅಂಜನಾದ್ರಿ ದರ್ಶನ ಪಡೆದ ತೊಗಾಡಿಯಾ

Praveen Togadia who got darshan of Anjanadri
ಬೆಟ್ಟದಲ್ಲಿ ಅಂತಾರಾಷ್ಟ್ರೀಯ ಹಿಂದು ಪರಿಷತ್ ಸಂಸ್ಥಾಪಕ ಪ್ರವೀಣ್ ತೊಗಾಡಿಯಾ ಅವರು ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು. ಮುಖಂಡರಾದ ಮಂಜುನಾಥ ಕಟ್ಟಿಮನಿ, ದೊಡ್ಡಯ್ಯಸ್ವಾಮಿ ಹಣವಾಳ ಇತರರಿದ್ದರು.
Published on

ಗಂಗಾವತಿ: ಅಂತಾರಾಷ್ಟ್ರೀಯ ಹಿಂದು ಪರಿಷತ್ ಸಂಸ್ಥಾಪಕ ಪ್ರವೀಣ್ ತೊಗಾಡಿಯಾ ಅವರು ಮಂಗಳವಾರ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, ಅಂಜನೇಯಗೆ ವಿಶೇಷ ಪೂಜೆ ಸಲ್ಲಿಸಿದರು.

ಬೆಟ್ಟದ ಪಾದಗಟ್ಟೆಯಲ್ಲಿ ಪೂಜೆ ಸಲ್ಲಿಸಿದ ಅವರನ್ನು ಹಿಂದುಪರ ಕಾರ್ಯಕರ್ತರು ಸನ್ಮಾನಿಸಿದರು. ನಂತರ ಪಂಪಾಸರೋವರದ ವಿಜಯಲಕ್ಷ್ಮಿ ದೇವಾಲಯಕ್ಕೆ ತೆರಳಿ ಮಾಹಿತಿ ಪಡೆದರು. ಸ್ಥಳೀಯ ಕುಟೀರವೊಂದರಲ್ಲಿ ಹಿಂದುಪರ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಸಂಘಟನೆ ಮತ್ತು ರಾಷ್ಟ್ರೀಯತೆ ಕುರಿತು ಚರ್ಚಿಸಿದರು.

ರಾಜವಂಶಸ್ಥ ಆನೆಗೊಂದಿಯ ರಾಜಾ ಶ್ರೀಕೃಷ್ಣ ದೇವರಾಯ ನಿವಾಸಕ್ಕೆ ತೆರಳಿ, ಸಂಸ್ಥಾನದ ಬಗ್ಗೆ ಮಾಹಿತಿ ಪಡೆದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಮಂಜುನಾಥ ಕಟ್ಟಿಮನಿ, ದೊಡ್ಡಯ್ಯಸ್ವಾಮಿ ಹಣವಾಳ, ವಿನಯ್ ಪಾಟೀಲ್, ಬಾಲು ಆನೆಗೊಂದಿ, ಮಂಜುನಾಥ, ಶ್ರವಣಕುಮಾರ ರಾಯ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net