ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ

28vtp1 protest memorandam
Published on

ವಿರಾಜಪೇಟೆ: ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಯಾರು ಹತ್ಯೆ ಖಂಡಿಸಿ ಸಂಘ ಪರಿಹಾರದ ಕಾರ್ಯಕರ್ತರು ವಿರಾಜಪೇಟೆು ಗಡಿಯಾರ ಕಂಬ ಬಳಿ ಗುರುವಾರ ರಸ್ತೆ ತಡೆದು ಪ್ರತಿಭಟಿಸಿದರು. ಬಿಜೆಪಿ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿದರು. ತಮ್ಮ ಬೇಡಿಕೆಯ ಮನವಿ ಪತ್ರವನ್ನು ವಿರಾಜಪೇಟೆ ಡಿವೈಎಸ್ಪಿ ನಿರಂಜನ್‌ರಾಜೆ ಅರಸ್ ಅವರಿಗೆ ಸಲ್ಲಿಸಿದರು.

ಸಂಘ ಪರಿವಾರದ ಮುಖಂಡ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಹಿಂದುಗಳ ಹತ್ಯೆ, ಹಲ್ಲೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಇಂತಹ ಸರ್ಕಾರ ಇದ್ದರೆಷ್ಟು, ಹೋದರೆಷ್ಟು. ನಿಷ್ಕ್ರೀಯ ಗೃಹ ಮಂತ್ರಿ ಕೂಡಲೇ ರಾಜಿನಾಮೆ ಕೊಟ್ಟು ಹೋಗುವುದು ಒಳಿತು ಎಂದರು.
ಬಿಜೆಪಿ ಸರ್ಕಾರದಲ್ಲಿಯೇ ಹಿಂದುಗಳಿಗೆ ರಕ್ಷಣೆ ಇಲ್ಲದ ಮೇಲೆ ಇನ್ಯಾವ ಸರ್ಕಾರ ರಕ್ಷಣೆ ನೀಡುತ್ತದೆ. ಒಬ್ಬ ಕಾರ್ಯಕರ್ತನ ಬಲಿದಾನ ಆದರೂ ನೂರಾರು ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ. ತಮ್ಮನ್ನ ಸಮರ್ಥಿಕೊಳ್ಳಲು ಗೃಹ ಮಂತ್ರಿಗಳು ಹಿಜಾಬ್ ಘಟನೆಗೆ ಹೋಲಿಕೆ ಮಾಡುತ್ತಾರೆ. ಹಿಜಾಬ್ ಘಟನೆಗೂ ಕೊಲೆಗೂ ಸಂಬಂಧವಿಲ್ಲ. ನಾವು ಯಾವ ಸರ್ಕಾರಕ್ಕೆ ಮತ ಹಾಕಿ ಆರಿಸಿ ಕಳುಹಿಸಿದ್ದೇವೋ ಅದೇ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ವಿಎಚ್‌ಪಿ ತಾಲೂಕು ಅಧ್ಯಕ್ಷ ಬಿ.ಎಂ. ಕುಮಾರ್, ತಾಲೂಕು ಕಾರ್ಯದರ್ಶಿ ಕೇತಿರ ಯತೀಶ್, ಭಜರಂಗ ದಳ ಸಂಚಾಲಕ ವಿವೇಕ್ ರೈ, ಹಿಂದು ಜಾಗರಣ ವೇದಿಕೆ ಪ್ರಮುಖ ದಿನೇಶ್ ನಾಯರ್, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಪುರಸಭೆ ಅಧ್ಯಕ್ಷೆ ಸುಶ್ಮಿತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net