ನೆಟ್ಟಾರು ಪ್ರಕರಣದಲ್ಲಿ ತಲೆಮರೆಸಿಕೊಂಡ ಪಿಎಫ್ಐ ಸದಸ್ಯರ ಮಾಹಿತಿಗೆ ಬಹುಮಾನ ಘೋಷಿಸಿದ ಎನ್‌ಐಎ

mng nov1 NIA poster - Copy
Published on

ವಿಟ್ಲ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಪಿಎಫ್‌ಐ ಸದಸ್ಯರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಘೋಷಿಸಿದೆ.

ಬೆಳ್ಳಾರೆ ಬೂಡು ನಿವಾಸಿ ಮೊಹಮ್ಮದ್ ಮುಸ್ತಫ ಎಸ್. ಅಲಿಯಾಸ್ ಮುಸ್ತಫ ಪೈಚಾರು ಹಾಗೂ ಮಡಿಕೇರಿ ಗದ್ದಿಗೆ ಮಸೀದಿ ಹಿಂಭಾಗದ ನಿವಾಸಿ ಎಂ.ಎಚ್. ತುಫೈಲ್‌ನನ್ನು ಹುಡುಕಿಕೊಟ್ಟವರಿಗೆ ತಲಾ 5 ಲಕ್ಷ ರೂ, ಸುಳ್ಯ ನಗರ ಕಲ್ಲುಮುಟ್ಟು ನಿವಾಸಿ ಉಮ್ಮರ್ ಫಾರೂಕ್ ಎಂ.ಆರ್. ಅಲಿಯಾಸ್ ಉಮ್ಮರ್, ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಪೈಂಟರ್ ಸಿದ್ದೀಕ್ ಅಲಿಯಾಸ್ ಗುಜರಿ ಸಿದ್ದೀಕ್ ಹುಡುಕಿಕೊಟ್ಟವರಿಗೆ ತಲಾ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

ಇವರ ಮಾಹಿತಿ ತಿಳಿದವರು ದೂರವಾಣಿ: 080-29510900, 8904241100, ಇಮೇಲ್: info.blr.nia@gov.in, ಅಂಚೆ ವಿಳಾಸ: ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ), 8ನೇ ಮಹಡಿ ಸರ್ ಎಂ ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಲೂರು, ಬೆಂಗಳೂರು-560071ಗೆ ಮಾಹಿತಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net