ಕೊಲೆ ಪ್ರಕರಣದಲ್ಲಿ ಶಿಕ್ಷೆಗೀಡಾಗಿರುವ ಪ್ರವೀಣ್ ಬಿಡುಗಡೆಗೆ ಬೇಡ; ಪತ್ನಿ, ಕುಟುಂಬ ಸದಸ್ಯರಿಂದ ಕಮಿಷನರ್‌ಗೆ ಮನವಿ

IMG-20220809-WA0011
Published on

ಮಂಗಳೂರು: ನಗರ ಹೊರವಲಯದ ವಾಮಂಜೂರಿನಲ್ಲಿ 1994ರಲ್ಲಿ ತನ್ನ ಕುಟುಂಬದ ನಾಲ್ಕು ಮಂದಿಯನ್ನು ಕೊಂದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ಪ್ರವೀಣನನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಸರ್ಕಾರ ನಿರ್ಧರಿಸಿದ್ದು, ಈ ಕುರಿತ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ಆತನ ಪತ್ನಿ ಸಹಿತ ಕುಟುಂಬ ಸದಸ್ಯರು ಮಂಗಳವಾರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕುಟುಂಬ ಸದಸ್ಯ ಸೀತಾರಾಮ ಗುರುಪುರ, ಆತ ಬಿಡುಗಡೆಗೆ ಅರ್ಹನೇ ಅಲ್ಲ. ಬಿಡುಗಡೆಯಾದರೆ ಇನ್ನೂ ಕೆಲವರನ್ನು ಕೊಲೆ ಮಾಡುವುದಾಗಿ ಈಗಾಗಲೇ ಬೆದರಿಕೆ ಹಾಕಿದ್ದ. ಅದ್ದರಿಂದ ಯಾವುದೇ ಕಾರಣಕ್ಕೂ ಬಿಡುಗಡೆಯಾಗದಂತೆ ಪೊಲೀಸ್ ಇಲಾಖೆ ಕ್ರಮ‌ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಮಿಷನರ್ ಮಾತನಾಡಿ, ಕುಟುಂಬಸ್ಥರ ಮನವಿ ಸ್ವೀಕರಿಸಲಾಗಿದ್ದು, ಉನ್ನತ ಅಧಿಕಾರಿಗಳಿಗೆ ಸಲ್ಲಿಸಲಾಗುವುದು. ಕಾನೂನು ಪ್ರಕಾರ ಏನು ಮಾಡಲು ಅವಕಾಶವಿದೆ ಅದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net