

ಕುಶಾಲನಗರ:
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರವೀಣ್ ಕುಮಾರ್ ಅವರನ್ನು ಪಂಚಾಯಿತಿಯ ಪ್ರಭಾರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಹಿಂದಿನ ಅಧ್ಯಕ್ಷೆ ರುಕ್ಮಿಣಿ ಅವರನ್ನು ಅವಿಶ್ವಾಸ ತಂದು ಪದಚ್ಯುತ ಗೊಳಿಸಿದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ನೇಮಕವಾಗಿದ್ದಾರೆ.
ಈ ಸಂದರ್ಭ ಪಂಚಾಯಿತಿ ಪಿಡಿಒ ಸುಮೇಶ್, ಸದಸ್ಯರಾದ ಶಿವಪ್ಪ, ಕುಡೆಕಲ್ಲು ನಿತ್ಯಾನಂದ, ಪಟ್ಟುಮಾದಪ್ಪ, ರಮೇಶ್ ಪೂಜಾರಿ, ಚಿದಾನಂದ, ಯಶೋಧಾ, ಉಮಾ, ಸೌಮ್ಯ, ಸುಶೀಲಾ, ಪ್ರದೀಪ್, ಸರ್ವಮಂಗಳ ಇದ್ದರು.