ಅಮರೇಶ್ವರ ನಗರದಲ್ಲಿ 4ನೇ ದಿನದ ಪುರಾಣ ಪ್ರವಚನ

19GDG04
ಗದಗ ಅಮರೇಶ್ವರ ನಗರದಲ್ಲಿ ದಸರಾ ಹಬ್ಬದ ನಾಲ್ಕನೇ ದಿನದ ದೇವಿ ಮಹಾಪುರಾಣ ಪ್ರವಚನ ಜರುಗಿತು. ಕ್ಕೀರೇಶ್ವರ ಶ್ರೀಗಳು, ಲಡ್ಡು ತಾತನವರು, ಸುವರ್ಣಾ ನಾಲ್ವಾಡ, ಶೋಭಾ ದುರಗಣ್ಣವರ, ಜಿ. ಎಂ. ಗುರುಮಠ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
"ಮಾನವ ಜನ್ಮ ದೊಡ್ಡದು ಹುಚ್ಚಪ್ಪಗಳಿರಾ ಹಾನಿಮಾಡಿಕೊಳ್ಳಲು ಬೇಡಿ' ಎಂಬ ದಾಸರ ವಾಣಿಯಂತೆ ಮನುಷ್ಯ ತನ್ನಲ್ಲಿರುವ ಅರಿಷಡ್ವರ್ಗಗಳನ್ನು ಮೆಟ್ಟಿ, ಅವುಗಳಿಂದ ದೂರವಿದ್ದು ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಳಸಾಪೂರದ ಓಂಕಾರೇಶ್ವರ ಹಿರೇಮಠದ ಕ್ಕೀರೇಶ್ವರ ಶ್ರೀಗಳು ಹೇಳಿದರು.
ಅಮರೇಶ್ವರ ನಗರದಲ್ಲಿ ದಸರಾ ಹಬ್ಬದ ಪ್ರಯುಕ್ತ ಏರ್ಪಡಿಸಿದ ದೇವಿ ಮಹಾಪುರಾಣದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅಜ್ಞಾನ ಅಳಿದು, ಸುಜ್ಞಾನ ಪಡೆದುಕೊಂಡು ಕಾಯಕ ಯೋಗಿಗಳಾಗಿ ದಾನ, ಧರ್ಮಗಳನ್ನು ಮಾಡುತ್ತ ಸಮಾಜಮುಖಿಯಾಗಿ ಹಾಗೂ ಸಮಾಜದ ಕಣ್ಮನಿಗಳಾಗಿ ಜೀವನ ಸಾಗಿಸಿದಾಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ ಎಂದರು
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಸಿದ್ದು ಪಲ್ಲೇದ, ಪೋಷಕರು ಮಕ್ಕಳಲ್ಲಿ ಧಾಮಿರ್ಕ ಮನೋಭಾವನೆ ಬೆಳೆಸಬೇಕು ಎಂದರು.
ಬಾಗಲಕೋಟೆಯ ಲಡ್ಡು ತಾತನವರು ಸಮ್ಮುಖ ವಹಿಸಿದ್ದರು. ಸುವರ್ಣಾ ನಾಲ್ವಾಡ, ಶೋಭಾ ದುರಗಣ್ಣವರ, ಜಿ. ಎಂ. ಗುರುಮಠ, ಶ್ರೀಕಾಂತ ದೊಡ್ಡಮನಿ, ಎಂ. ಎ. ಸಂಗನಾಳ, ಚಂದ್ರಶೇಖರ ಗೊಲ್ಲರ, ಗುರುನಾಥ ಹೊಸಮನಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net