ಭಾಗವತ ಪ್ರವಚನ 10ರಿಂದ

Published on

ಹುಬ್ಬಳ್ಳಿ: ಇಲ್ಲಿಯ ದುರ್ಗದಬೈಲ್ ಗವಳಿ ಗಲ್ಲಿಯಲ್ಲಿರುವ ಶ್ರೀ ವೆಂಕಟೇಶ ದೇವರ ದೇವಸ್ಥಾನದಲ್ಲಿ 2025-26 ಪರ್ಯಾಯ ಮಹೋತ್ಸವ ನಿಮಿತ್ತ ಒಂದು ವರ್ಷ ಕಾಲ ಸಮಗ್ರ ಭಾಗವತ ಪ್ರವಚನ ಯಜ್ಞ ಹಮ್ಮಿಕೊಳ್ಳಲಾಗಿದೆ.

ಮೇ 10ರಿಂದ 14ರ ವರೆಗೆ ನಿತ್ಯ ಸಂಜೆ 6.30ಕ್ಕೆ ಭಾಗವತ ದ್ವೀತಿಯ ಸ್ಕಂದ ಕುರಿತು ಪಂ. ಜಯತೀರ್ಥಾಚಾರ್ಯ ಹುಂಡೇಕರ ಅವರು ಪ್ರವಚನ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net