

ವಿಜಯವಾಣಿ ಸುದ್ದಿಜಾಲ ಗದಗ
ಆಧುನಿಕತೆಯಲ್ಲಿ ನಮ್ಮ ಬಾಹ್ಯಾಂಗಗಳ ಅಲಂಕಾರ, ಶುಚಿತ್ವ, ಶುದ್ಧತೆಗಳಿಗೆ ಹೆಚ್ಚಿನ ಮಹತ್ವ ಕೊಡುತ್ತೇವೆ. ಆದರೆ, ಆಂತರಿಕವಾಗಿರುವ ನಮ್ಮ ಮನ, ಬುದ್ಧಿ, ಭಾವಗಳಿಗೆ ಪರಿಶುದ್ಧತೆಗೆ ಹೆಚ್ಚಿನ ಗಮನ ಕೊಡಲು ಹಿಂಜರಿಯುತ್ತೇವೆ. ಇದರಿಂದ ನಮ್ಮ ಬದುಕು ದುಃಖಿತವಾಗುತ್ತದೆ ಎಂದು ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಉಮೇಶ ಪುರದ ಹೇಳಿದರು.
ಸಿದ್ಧಲಿಂಗ ನಗರದ ಯೋಗ ವಿಾನ ಕೇಂದ್ರದಲ್ಲಿ ಶನಿವಾರ ಜರುಗಿದ ಶ್ರಾವಣ ಮಾಸದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದ ಪ್ರಾರಂಭೊತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಹ್ಯ ಶುದ್ಧಿಗಾಗಿ ನಮಗೆ ಸಾಕಷ್ಟು ಸಾಮಗ್ರಿಗಳು ದೊರೆಯುತ್ತವೆ. ಆದರೆ, ಅಂತರಂಗ ಶುದ್ಧಿಯಿಂದ ರೋಗಗಳು ದೂರ ಆಗುತ್ತವೆ. ಅಂತರರಂಗ ಶುದ್ಧಿಗೆ ಶಿವಶರಣರ ವಚನಗಳನ್ನು ಅರಿತು ಆಚರಿಸಬೇಕು ಎಂದರು.
ಶಿಕ್ಷಕ ಜಿ. ಪಿ. ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಕಾಯಕ್ಕಿಂತ ನಮ್ಮ ಕಾಯಕ, ಆಚಾರ, ವಿಚಾರ, ನುಡಿಗಳು ಶುದ್ಧವಾಗಿರಬೇಕು ಎಂದರು. ವಾಸನಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಾನಿ ಎಸ್. ಕೆ. ನಾಲತ್ವಾಡಮಠ, ಜಯಶ್ರೀ ವಸ್ತ್ರದ, ಸುನಂದಾ ಜ್ಯಾನೋಪಂರೆ, ಗಿರಿಜಾ ನಾಲತ್ವಾಡಮಠ, ಎಂ. ಆರ್. ಬಸವರಡ್ಡಿ, ಎಸ್. ಬಿ. ಗೌಡರ, ಎಸ್. ಬಿ. ಆನೆಹೊಸೂರ, ಆನಂದ ಬದಿ, ಬಸವರಾಜ ತೊಟಿಗಿಡ, ಬಸವರಾಜ ಗಣಪ್ಪನವರ, ಶಾಂತಾ ಮುಂದಿನಮನಿ, ಪಾರ್ವತಿ ಭೂಮಾ, ಲಲಿತಾ ಅಣ್ಣಿಗೇರಿ, ಶಾರದಾ ಪಾಟೀಲ, ಅರುಣಾ ಇಂಗಳಳ್ಳಿ, ಗೌರಿ ಜೀರಂಕಳಿ ಹಲವರು ಇದ್ದರು.