ಶ್ರೀರಾಮ ದೇವರ ಪರಿವಾರ ಪ್ರತಿಷ್ಠಾಪನೆ

22 SBG-1 Rama Mandir Inaguration (2)
Published on

ಶ್ರವಣಬೆಳಗೊಳ: ಪಟ್ಟಣದ ಮಾರುತಿ ಸರ್ಕಲ್‌ನಲ್ಲಿ ಬನ್ನಿಮರ ಉದ್ಭವ ಶ್ರೀ ಆಂಜನೇಯಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ಶ್ರೀರಾಮ ದೇವರ ಪರಿವಾರ ಪ್ರತಿಷ್ಠಾಪನೆ ಹಾಗೂ ನೂತನ ಶ್ರೀರಾಮ ಮಂದಿರ ಉದ್ಘಾಟನೆ ನೆರವೇರಿತು.

ಪ್ರಾತಃಕಾಲದಿಂದಲೇ ಪೂಜಾ ವಿಧಿ-ವಿಧಾನಗಳು ನೆರವೇರಿದವು. ಶ್ರೀರಾಮ ದೇವರ ಪರಿವಾರ ಪ್ರತಿಷ್ಠಾಪನೆ, ಹೋಮ, ಮಹಾ ಮಂಗಳಾರತಿ, ಭಕ್ತಿಸುಧೆ ಹಾಗೂ ಭಕ್ತಿರಿಗೆ ಅನ್ನಸಂತರ್ಪಣೆ ನೆರವೇರಿತು.

ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಅಣತಿ ಆನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಲೋಕೇಶ್, ಉಪಾಧ್ಯಕ್ಷೆ ರಾಧಾ ಬಸವರಾಜ್ ಮುಂತಾದವರು ದೇವರ ದರ್ಶನ ಪಡೆದರು.

ಶ್ರೀರಾಮ ಮಂದಿರ ಸಮಿತಿ ಅಧ್ಯಕ್ಷ ಶರತ್‌ಕುಮಾರ್, ಉಪಾಧ್ಯಕ್ಷ ದುಬೈ ರಾಜಣ್ಣ, ಕಾರ್ಯದರ್ಶಿ ಎಸ್.ಎಂ.ಲಕ್ಷ್ಮಣ್, ಖಜಾಂಚಿ ಎಸ್.ಜೆ.ಭಾಸ್ಕರಾಚಾರ್, ಪದಾಧಿಕಾರಿಗಳಾದ ಎಸ್.ಪಿ.ಕೃಷ್ಣಪ್ಪ, ದೂರಿ ಮಂಜಣ್ಣ, ಎಸ್.ಕೆ.ರಾಘವೇಂದ್ರ, ರೂಪೇಶ್, ಚಂದ್ರೇಗೌಡ, ಎಸ್.ಆರ್.ರಮೇಶ್, ಎಸ್.ಎಂ.ಜನಾರ್ದನ್, ಎಸ್.ಎಂ.ಹರೀಶ್, ಅರುಣ್, ಕಿರಣ್, ಪೇಪರ್ ದಿನೇಶ್ ಮುಂತಾದವರಿದ್ದರು. ಅಜ್ಜೇನಹಳ್ಳಿ ಪ್ರೇಮ್ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net