ಪ್ರತಿಕಾಲೇಜು ನ್ಯಾಕ್ ಪ್ರಕ್ರಿಯೆಗೆ ಒಳಪಡಲಿ

COLLEGE
ದೇವದುರ್ಗದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ನ್ಯಾಕ್ ತರಬೇತಿ ಕಾರ್ಯಕ್ರಮದಲ್ಲಿ ವಿಶೇಷ ನ್ಯಾಕ್ ಅಧಿಕಾರಿ ಸಂಗಣ್ಣ ನಿಷ್ಟಿ ಮಾತನಾಡಿದರು. ಪ್ರಾಚಾರ್ಯರಾದ ಡಾ.ಜೆ.ಎಲ್.ಈರಣ್ಣ, ಡಾ.ಪ್ರಭುಲಿಂಗ ಸಪ್ಲಿ, ಡಾ.ಫಾತಿಮಾ ಹಸ್ನಾ ಬೇಗಂ, ಕಾರ್ಯಕ್ರಮ ಸಂಯೋಜಕ ಡಾ.ಅನಂತಾ ಬಿ.ಜಿ, ಸಹ ಸಂಚಾಲಕರಾದ ಡಾ.ಮಲ್ಲಯ್ಯ, ಸುಭಾಶ್ಚಂದ್ರ ಪಾಟೀಲ್, ಹನುಮಂತ ಜಗ್ಲಿ ಇತರರಿದ್ದರು.
Published on

ದೇವದುರ್ಗ: ಶಿಕ್ಷಣ ಗುಣಮಟ್ಟ ಹೆಚ್ಚಳ, ಪರಿಣಾಮಕಾರಿ ಬೋಧನೆ ಹಾಗೂ ಕಲಿಕೆ ಪ್ರಕ್ರಿಯೆ ಹೆಚ್ಚಿಸಲು ಪ್ರತಿಯೊಂದು ಕಾಲೇಜು ನ್ಯಾಕ್ ಪ್ರಕ್ರಿಯೆಗೆ ಒಳಪಡಬೇಕಿದೆ ಎಂದು ನ್ಯಾಕ್ ತರಬೇತಿ ಕಚೇರಿಯ ವಿಶೇಷ ನ್ಯಾಕ್ ಅಧಿಕಾರಿ ಸಂಗಣ್ಣ ನಿಷ್ಟಿ ಹೇಳಿದರು.

ತರಬೇತಿ ಕಾರ್ಯಕ್ರಮ

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ನ್ಯಾಕ್ ತರಬೇತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ನ್ಯಾಕ್ ಪ್ರಕ್ರಿಯೆಗೆ ಒಳಪಡುವುದು ಅವಶ್ಯವಾಗಿದೆ.

ಅದಕ್ಕೆ ಬೇಕಾದ ಎಲ್ಲ ಮಾಹಿತಿಯನ್ನು ಕಲಬುರಗಿಯ ಜಂಟಿ ನಿರ್ದೇಶಕರ ಕಚೇರಿಯಿಂದ ಮಾರ್ಗದರ್ಶನ ನೀಡಲು ಸಿದ್ಧ ಎಂದು ಹೇಳಿದರು.


ನಿವೃತ್ತ ಪ್ರಾಚಾರ್ಯ, ವಿಶೇಷ ನ್ಯಾಕ್ ಅಧಿಕಾರಿ ಡಾ.ರಾಘವೇಂದ್ರ ಗುಡುಗುಂಟಿ ಮಾತನಾಡಿ, ಇಂದು ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾಣುತ್ತಿದ್ದು ವಿವಿಧ ತರಬೇತಿ, ಕ್ಯಾಂಪಸ್ ಮೂಲಕ ವಿದ್ಯಾರ್ಥಿಗಳ ಕೌಶಲಕ್ಕೆ ಆದ್ಯತೆ ನೀಡಲಾಗುತ್ತಿದೆ. ಪಾಲಕರು ಸರ್ಕಾರಿ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net