ಭರಮಸಾಗರದಲ್ಲಿ ಪ್ರತಿಜ್ಞಾವಿಧಿ

BRM swacha bharamasa 23 a (1)
Published on

ಭರಮಸಾಗರ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಪಂ, ಆರೋಗ್ಯ ಇಲಾಖೆ ಸಿಬ್ಬಂದಿ, ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭಾನುವಾರ ಸ್ವಚ್ಛತಾ ಕಾರ್ಯ ನಡೆಸಿದರು.

ತ್ಯಾಜ್ಯ ಸಂಗ್ರಹಣಾ ವಾಹನದಲ್ಲಿ ಸ್ವಚ್ಛತೆ ಕುರಿತು ಹಾಡುಗಳನ್ನು ಹಾಕಿ ನಡಿಗೆ ಮೂಲಕ ಜಾಗೃತಿ ಮಾಡಲಾಯಿತು. ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಇತರ ಮುಖ್ಯ ರಸ್ತೆಗಳಲ್ಲಿ ತ್ಯಾಜ್ಯವನ್ನು ಸಂಗ್ರಹಿಸಿ ನಿಗದಿಪಡಿಸಿದ ಸ್ಥಳಕ್ಕೆ ಸಾಗಿಸಲಾಯಿತು.

ಗ್ರಾಮ ಪಂಚಾಯಿತು ಅಧ್ಯಕ್ಷೆ ರತ್ನಮ್ಮ, ಪಿಡಿಒ ಶಿವಪ್ಪ, ಸದಸ್ಯರಾದ ಮಂಜುಳಾ, ರಾಜಣ್ಣ, ಸುನಂದಮ್ಮ, ಇಬ್ರಾಹಿಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net