ಮೈಸೂರು: ರಂಗವಲ್ಲಿ ರಂಗ ತಂಡದಿಂದ ಮೇ 30ರಿಂದ ಜೂನ್ 2ರವರೆಗೆ ನಗರದಲ್ಲಿ ಭಾಸ ಮಹಾ ಕವಿಯ ‘ಪ್ರತಿಜ್ಞಾ’ ಹಾಗೂ ‘ಸ್ವಪ್ನ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಚಾಲಕ ರವಿಪ್ರಸಾದ್ ತಿಳಿಸಿದರು.
ಕಲಾಮಂದಿರದ ಕಿರುರಂಗಮಂದಿರಲ್ಲಿ ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದ್ದು, ಯುವ ನಿರ್ದೇಶಕ ಉಮೇಶ್ ಸಾಲಿಯಾನ್ ನಿರ್ದೇಶನ, ಎಚ್.ಕೆ.ದ್ವಾರಕಾನಾಥ್ ರಂಗ ವಿನ್ಯಾಸ, ಕೆ.ಆರ್.ನಂದಿನಿ ಅವರ ವಸ್ತ್ರ ವಿನ್ಯಾಸದಲ್ಲಿ ಈ ನಾಟಕಗಳು ಮೂಡಿಬರಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡೂ ನಾಟಕ ಒಂದಕ್ಕೊಂದು ಪೂರಕವಾಗಿ ಒಂದರ ನಂತರ ಒಂದರಂತೆ ಸುಮಾರು ಎರಡೂ ಕಾಲು ಗಂಟೆ ಪ್ರದರ್ಶನಗೊಳ್ಳಲಿವೆ. ಮೊದಲಿನದು ವೀರ ರಸದ್ದಾದರೆ, ಎರಡನೆಯದು ಲಾಲಿತ್ಯ ಹಾಗೂ ಶೃಂಗಾರ ರಸದ್ದಾಗಿದೆ ಎಂದು ಮಾಹಿತಿ ನೀಡಿದರು.
ನಿರ್ದೇಶಕ ಸಾಲಿಯಾನ್ ಉಮೇಶ್, ಆಯೋಜಕರಾದ ಸುಧೀರ್‌ಕುಮಾರ್, ಮನಸ್ವಿನಿ, ಸುಖದೇವ್, ತೇಜಸ್ವಿ ಇದ್ದರು.