

ಬದಿಯಡ್ಕ: ಕಾಸರಗೋಡು ಎಸ್‌ಎಸ್‌ಕೆ, ಮಂಜೇಶ್ವರ ಬಿಆರ್‌ಸಿ ಸಹಕಾರದೊಂದಿಗೆ ಗುವೆದಪಡ್ಪು ಪ್ರತಿಭಾ ಕೇಂದ್ರ ನೇತೃತ್ವದಲ್ಲಿ ಪ್ರತಿಭೋತ್ಸವ-2025 ಕಾರ್ಯಕ್ರಮ ಗುವೆದಪಡ್ಪು ಪ್ರತಿಭಾ ಕೇಂದ್ರದಲ್ಲಿ ಇತ್ತೀಚೆಗೆ ಜರುಗಿತು.
ವರ್ಕಾಡಿ ಗ್ರಾಪಂ ಸದಸ್ಯೆ ಸೀತಾ ಕಾರ್ಯಕ್ರಮ ಉದ್ಘಾಟಿಸಿದರು. ಆನೆಕಲ್ಲು ಶಾಲೆ ಶಿಕ್ಷಕ ರವಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ನಾಯ್ಕ, ಅಶೋಕ್ ಕೊಡ್ಲಮೊಗರು ಶುಭ ಹಾರೈಸಿದರು. ಸಿಆರ್‌ಸಿ ಸಂಯೋಜಕಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಚೈತ್ರಾ ಶೆಟ್ಟಿ ವಂದಿಸಿದರು.
ಬಳಿಕ ಮಕ್ಕಳಿಗೆ ಜಾನಪದ ಗೀತೆ, ಸಿನಿಮಾ ಗೀತೆ, ನಡಿಗೆ ಸ್ಪರ್ಧೆ ಜರುಗಿತು. ಜನಪದ ಗೀತೆ ಸ್ಪರ್ಧೆಯಲ್ಲಿ ಮುಪಿದಾ ಪ್ರಥಮ, ಅಂಕಿತಾ ದ್ವಿತೀಯ, ಸಿನಿಮಾ ಗೀತೆಯಲ್ಲಿ ತಪ್ಸನಾ, ಸಮ್ನ ದ್ವಿತೀಯ, ನಡಿಗೆ ಸ್ಪರ್ಧೆಯಲ್ಲಿ ಮುಜೈನ್ ಮತ್ತು ತಪ್ಸಿನಾ ಪ್ರಥಮ ಸ್ಥಾನ ಪಡೆದರು.