

ಬೆಳಗಾವಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸುವ ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಅತ್ಯಂತ ಸೂಕ್ತ ವೇದಿಕೆಯಾಗಿದೆ ಎಂದು ಪ್ರೇಷಿಯಸ್ ಬ್ಲಾಸಮ್ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾಚಾರ್ಯೆ ಜೋತ್ಸನಾ ಸ್ವಾಮಿ ಹೇಳಿದರು.
ಬೆಳಗಾವಿ ನಗರದ ಸರ್ಕಾರಿ ಮರಾಠಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಶನಿವಾರ ಏರ್ಪಡಿದ್ದ ವಡಗಾವಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೋಲು-ಗೆಲುವು ಸಾಮಾನ್ಯ. ಆದರೆ, ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿಸುತ್ತದೆ. ದೊಡ್ಡ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದರು.
ಎಸ್.ಎಂ.ಶೆಟ್ಟಿ, ಐ.ಡಿ.ಹಿರೇಮಠ, ಎಸ್.ಬಿ.ಪಾಟೀಲ, ಬಿಆರ್‌ಸಿ ಕಾಪಸಿ, ಗಿರಿಜಾ ಮಣ್ಣಿಕೇರಿ, ಎನ್.ಎ. ರಾಜಗೋಳಿ, ದೀಪಾಲಿ ಟೊಪ್ಪಿಗಿ, ಜಿ.ಟಿ.ಚೋಳನೆಕರ್, ಮಲ್ಲಿಕಾರ್ಜುನ ಗೌಡರ, ಮಾಲತಿ ಕುಲಕರ್ಣಿ ಸೇರಿ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು. ಸಿಆರ್‌ಪಿ ಐ.ಎಂ.ಸನದಿ ಸ್ವಾಗತಿಸಿದರು. ಎನ್.ಎ್.ಕಿತ್ತೂರ ಹಾಗೂ ದೀಪಾಲಿ ದೇಸೂರ್ಕರ್ ನಿರೂಪಿಸಿದರು. ಪದ್ಮಜಾ ವಂದಿಸಿದರು.