ಎಸ್‌ಡಿಎಂ ಪಪೂ ಕಾಲೇಜಿನಲ್ಲಿ ಪ್ರತಿಭಾ ಸಮ್ಮಾನ್

New Project (11)
Published on

ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ರೋವರ್ಸ್-ರೇಂಜರ್ಸ್ ದಳದಿಂದ 2024-25ರ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರೋವರ್ಸ್-ರೇಂಜರ್ಸ್ ದಳದ ಪರವಾಗಿ ಅತೀ ಹೆಚ್ಚು ಅಂಕ ಗಳಿಸಿದ ದಳದ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ‘ಪ್ರತೀಭಾ ಸಮ್ಮಾನ್-2025’ ನಡೆಯಿತು.

2024-2025ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅನನ್ಯಾ, ಪರೀಕ್ಷಿತ್ ಜೈನ್ ಅವರನ್ನು ಸನ್ಮಾನಿಸಲಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ, ದ.ಕ. ಜಿಲ್ಲಾ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ. ಸಾಧಕರನ್ನು ಸನ್ಮಾನಿಸಿದರು.

ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ. ಜಿಲ್ಲಾ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ. ಅವರನ್ನು ಗೌರವಿಸಲಾಯಿತು. ಉಪ ಪ್ರಾಚಾರ್ಯ ಡಾ.ರಾಜೇಶ ಬಿ., ಕಾಲೇಜು ರೋವರ್ಸ್-ರೇಂಜರ್ಸ್ ದಳ ನಾಯಕರಾದ ಲಕ್ಷ್ಮೀಶ್ ಭಟ್, ಅಂಕಿತಾ ಎಂ.ಕೆ., ಕಾಲೇಜಿನ ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಪವನ್ ಬಿ.ಪಿ. ಸ್ವಾಗತಿಸಿದರು. ರೇಂಜರ್ ದೀಕ್ಷಿತಾ ವಂದಿಸಿದರು. ಸೌಜನ್ಯ ಅಭ್ಯಾಗತರ ಪರಿಚಯ ವಾಚಿಸಿದರು. ತನ್ವಿ ಸಾಧಕ ಹಿರಿಯ ವಿದ್ಯಾರ್ಥಿಗಳ ಪರಿಚಯಿಸಿದರು. ಮೊಹಮ್ಮದ್ ತೌಶಿಪ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net