

ರಾಯಚೂರು ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘದಿಂದ ಜು.18 ರಂದು ಇಮ್ಮಡಿ ಸಿದ್ದರಾಮೇಶ್ವರ ಜನ್ಮ ದಿನಾಚರಣೆ ನಿಮಿತ್ತ ಚಿತ್ರದುರ್ಗದಲ್ಲಿ ಭೋವಿ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಭೋವಿ ವಡ್ಡರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣ ಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90 ಕ್ಕೂ ಅಧಿಕ ಅಂಕಗಳನ್ನುಗಳಿಸಿ ಉತ್ತೀರ್ಣರಾದಂತಹ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘದ ನೂತನ ಸದಸ್ಯರನ್ನು ಆಯ್ಕೆ ಮಾಡುವ ಪೂರ್ವ ಸಭೆ ಜು.16 ರಂದು ನಡೆಯಲಿದೆ. ಜಿಲ್ಲೆಯ ಸಮುದಾಯದ ಬಂಧುಗಳ ಭಾಗವಹಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೆ.ತಿಮ್ಮಪ್ಪ, ಲಕ್ಷ್ಮಣ, ಯಲ್ಲಪ್ಪ, ವೆಂಕಟೇಶ ಆದೋನಿ, ಹುಲಿಗೆಪ್ಪ, ಉರುಕುಂದ, ಈರಣ್ಣ ಇದ್ದರು.