

ಮೂಲ್ಕಿ: ವಿದ್ಯಾರ್ಥಿಗಳು ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಸಾಧಕರಾಗಿ ಬೆಳೆಯಬೇಕು ಎಂದು ಮೂಲ್ಕಿ ಪೊಲೀಸ್ ಉಪನಿರೀಕ್ಷಕಿ ಅನಿತಾ ಹೇಳಿದರು.
ಮೂಲ್ಕಿ ಕಿಲ್ಪಾಡಿ ಬೆಥನಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಬಹುವಾನ ವಿತರಿಸಿ ವಾತನಾಡಿದರು.
ಹೆತ್ತವರು ಸದಾ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆದು ಅವರ ಆಸಕ್ತಿಗೆ ಬೆಂಬಲವಾಗಿರಬೇಕು ಎಂದರು.
ಮೆಡಲಿನ್ ಹೈಸ್ಕೂಲ್ ಮುಖ್ಯಶಿಕ್ಷಕಿ ಸಿಸ್ಟರ್ ಜೆಸಿಂತಾ ಡಿಸೋಜ ವಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಅಡಕವಾಗಿರುತ್ತದೆ. ಸತತ ಪರಿಶ್ರಮದೊಂದಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಬಹುವಾನಗಳನ್ನು ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ. ಪ್ರಯತ್ನ ನಿರಂತರವಾಗಿರಬೇಕು. ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ರೀಟಾ ಶರಲ್, ಶಿಕ್ಷಕ ರಕ್ಷಕ ಸಂದ ಉಪಾಧ್ಯಕ್ಷೆ ಜೋಸ್ನಾ ಡಿ’ಅಲ್ಮೇಡಾ ಉಪಸ್ಥಿತರಿದ್ದರು.
ವಿಜೇತರ ಪಟ್ಟಿಯನ್ನು ಸವಿತಾ ಹಾಗೂ ರಾಧಿಕಾ ವಾಚಿಸಿದರು. ಶಾಲಾ ಸಹ ಶಿಕ್ಷಕಿ ಪ್ರೀವಾ ಸ್ವಾಗತಿಸಿದರು. ಶಶಿಕಲಾ ನಿರೂಪಿಸಿದರು. ಛಾಯಾ ವಂದಿಸಿದರು.