

ವಿಜಯಪುರ : ಜಿಲ್ಲಾ ತಳವಾರ ಸಮಾಜ ಪ್ರತಿಭಾ ಪುರಸ್ಕಾರ ಸಮಿತಿ, ಜ್ಞಾನಗಂಗಾ ವಿವಿಧೋದ್ಧೇಶಗಳ ಸಹಕಾರಿ ಸಂ ಹಾಗೂ ದತ್ತಿ ದಾನಿಗಳ ಸಹಯೋಗದಲ್ಲಿ ಆ. 24 ರಂದು ಬೆಳಗ್ಗೆ 10.15ಕ್ಕೆ 7ನೇ ವರ್ಷದ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ನಡೆಯಲಿದೆ.ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕ್ರಮ ಉದ್ಘಾಟಿಸುವರು.
ನಾಗಠಾಣ ಕ್ಷೇತ್ರದ ಶಾಸಕ ವಿಠಲ ಕಟಕಧೋಂಡ ಹಾಗೂ ವಿ.ಪ. ಸದಸ್ಯ ಎನ್. ರವಿಕುಮಾರ ಉಪಸ್ಥಿತಿ ಹಾಗೂ ವಹಿಸುವರು. ಜ್ಞಾನಗಂಗಾ ವಿವಿಧೋದ್ಧೇಶಗಳ ಸಹಕಾರಿ ಸಂದ ಅಧ್ಯಕ್ಷ ಡಾ. ಅಶೋಕ ಸಾಸನೂರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ, ಶಿವಪ್ಪ ಅಂಬೆಗೇರ, ಶಾರದಾ ನಾಗನೂರ, ಮಂಜುನಾಥ ಮಸಳಿ, ಗಂಗುಬಾಯಿ ಧುಮಾಳೆ, ಬಿ.ಟಿ. ಸುಣಗಾರ, ಲಕ್ಷಿ$್ಮಕಾಂತ ನಿಂಬಾಳಕರ, ಅಶೋಕ ತಟಗಾರ, ಗುರುಪಾದಪ್ಪ ವಾಲಿಕಾರ ಆಗಮಿಸುವರು ಎಂದು ಪ್ರಕಟಣೆಯು ತಿಳಿಸಿದೆ.