ಪ್ರತಿಭಾ ಪುರಸ್ಕಾರ 26ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ವತಿಯಿಂದ ಡಿ.ವಿ. ಹಾಲಭಾವಿ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಚಿತ್ರಕಲೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಿ. 26ರಂದು ಬೆಳಗ್ಗೆ 11 ಗಂಟೆಗೆ ಆರ್ಟ್​ ಗ್ಯಾಲರಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ದಾವಣಗೇರಿ ವಿವಿ ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್​ ಚಿಕ್ಕಪಾಟೀಲ ಅತಿಥಿಯಾಗಿ ಆಗಮಿಸುವರು. ಟ್ರಸ್ಟ್​ ಸದಸ್ಯರಾದ ಸುರೇಶ ಹಾಲಭಾವಿ, ಡಾ. ಪಾರ್ವತಿ ಹಾಲಭಾವಿ, ಡಾ. ಬಿ. ಮಾರುತಿ, ಡಾ. ಬಿ. ಎಚ್​.ಕುರಿಯವರ, ಕುಮಾರ ಕಾಟೇನಹಳ್ಳಿ, ವಿಜಯಾನಂದ ಕಾಲವಾಡ ಉಪಸ್ಥಿತರಿರುವರು. ಟ್ರಸ್ಟ್​ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net