ಪ್ರತಿಭಾ ಪುರಸ್ಕಾರದ ಪೂರ್ವಭಾವಿ ಸಭೆ

MEETING NEW
Published on

ಹುಬ್ಬಳ್ಳಿ : ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜು. 23ರಂದು ಆಯೋಜಿಸಿರುವ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಪೂರ್ವಭಾವಿ ಸಭೆ ಬುಧವಾರ ಜರುಗಿತು.

ಸಮಾಜದ ಸಂಚಾಲಕ ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ರೂಪುರೇಷೆ ಹಾಗೂ ವೀರಶೈವ ಲಿಂಗಾಯತ ಒಳಪಂಗಡದ ಎಲ್ಲ ಮುಖಂಡರಿಗೆ ಆಹ್ವಾನಿಸುವ ಕುರಿತು ರ್ಚಚಿಸಲಾಯಿತು.

ಸಹ ಸಂಚಾಲಕ ಪ್ರಕಾಶ ಬೆಂಡಿಗೇರಿ, ಮಹಾಂತೇಶ ಗಿರಿಮಠ, ಅಜ್ಜಪ್ಪ ಬೆಂಡಿಗೇರಿ, ಸದಾಶಿವ ಚೌಶೆಟ್ಟಿ, ಮಹೇಶ ಚಂದರಗಿ, ಜಯಶ್ರೀ ನಿಂಬರಗಿ, ರತ್ನಾ ಗಂಗಣ್ಣವರ, ರತ್ನಾ ಚೌಶೆಟ್ಟಿ, ವಿಶಾಲಾ ಪಾಟೀಲ, ಅನ್ನಪೂರ್ಣ ಪಾಟೀಲ, ಸರೋಜಾ ಛಬ್ಬಿ, ವೀರುಪಾಕ್ಷ ರಾಯನಗೌಡ್ರ, ಈರಪ್ಪ ಎಮ್ಮಿ, ಈರೇಶ ಮುದಕವಿ, ಬಸಣ್ಣ ಬೆಲ್ಲದ, ಎಸ್.ಎಸ್. ಗಚ್ಚಿನವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net