ಮೈಸೂರು: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದ ವಿಶ್ವಕರ್ಮ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಕೆ.ಕೆಂಡಗಣ್ಣ ವಿಶ್ವಕರ್ಮ ಹೇಳಿದರು.
ಮೈಸೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ ಶೇ.85ಕ್ಕಿಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಅಲ್ಲದೇ ಅದಕ್ಕಿಂತ ಕಡಿಮೆ ಅಂಕ ಪಡೆದ ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸಕ್ತರು ಜೂ.30ರ ಒಳಗೆ ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆ, ಸಂಖ್ಯೆ 512, ಪೊಲೀಸ್ ಲೇಔಟ್ ಎರಡನೇ ಹಂತ, ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ, 80 ಅಡಿ ಮುಖ್ಯ ರಸ್ತೆ, ಮೈಸೂರು ಇಲ್ಲಿಗೆ ಅಗತ್ಯ ದಾಖಲಾತಿಗಳೊಡನೆ ಹಾಗೂ ಮೊಬೈಲ್ ನಂಬರ್ ಸಹಿತ ಅರ್ಜಿ ಕಳುಹಿಸಬೇಕು.
ಮಾಹಿತಿಗೆ ಮೊ.9902658188ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಮುಖಂಡರಾದ ಟಿ.ಎಸ್.ಸಿದ್ದರಾಜು, ಶ್ರೀಲಕ್ಷ್ಮೀ, ಸಿದ್ದೇಶ್, ಮಹಾಂತೇಶ್, ಮಂಜು, ಮಾವಳ್ಳಿ ಲೋಕೇಶ್ ಇತರರಿದ್ದರು.