

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ವತಿಯಿಂದ ಭಟ್ಕಳ ತಾಲೂಕು ಸ್ವಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶ್ರೀ ಶಾಂತೇರಿ ಕಾಮಾಕ್ಷಿ ಸಭಾಗೃಹದಲ್ಲಿ ಜರುಗಿತು.
ಜಿ.ಎಸ್.ಎಸ್. ಅಧ್ಯಕ್ಷ ಕಲ್ಪೇಶ ಪೈ, ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಿಕ್ಷಣ ಕ್ಷೇತ್ರಕ್ಕೆ ಧಾನಿಗಳ ಕೊಡುಗೆಯ ಕುರಿತು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಭಟ್ಕಳದ ವೈಟಲ್ ಅಲೈನ್ನ ವೈದ್ಯೆ ಡಾ. ಧನ್ಯಾ ಪ್ರಭು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. ಮಹಿಳಾ ಸಮಿತಿಯ ಉಪಾಧ್ಯಕ್ಷೆ ರಜನಿ ಪ್ರಭು ಮಾತನಾಡಿದರು.
ಗೌರವಾಧ್ಯಕ್ಷ ನರೇಂದ್ರ ನಾಯಕ ದಾನಿಗಳ ಹಾಗೂ ಸಮಾಜ ಬಾಂಧವರ ಸಹಕಾರದಿಂದ ನೀಡಲಾಗುವ ಜಿ.ಎಸ್.ಬಿ ಸ್ಕಾಲರ್ಶಿಪ್ಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ರಾಮು ಕಾಮತ, ಬಾಬಾನಂದ ಪೈ, ಪ್ರಸನ್ನ ಪ್ರಭು, ಸಮಿತಿಯ ಸದಸ್ಯರುಗಳಾದ ಅನೀಲ ಪೈ, ದೀಪಕ ನಾಯಕ, ವಿವೇಕ ಮಹಾಲೆ, ಪ್ರವೀಣ ನಾಯಕ, ಕೃಷ್ಣಾನಂದ ಪ್ರಭು ಸಹಿತ ಪಾಲಕ ಪೋಷಕರು ಉಪಸ್ಥಿತರಿದ್ದರು. ಸಹಕಾರ್ಯದರ್ಶಿ ಗುರುದಾಸ ಪ್ರಭು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಶ್ರೀನಾಥ ಪೈ ವಂದನಾರ್ಪಣೆಗೈದರು.