

ವಿಜಯಪುರ: ಕ್ಷೌರಿಕ ವೃತ್ತಿಯನ್ನು ನಂಬಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಸವಿತಾ ಸಮಾಜ ಅತ್ಯಂತ ಪ್ರಾಮಾಣಿಕ ಸೇವೆ ಮಾಡಿದವರ ಸಾಲಿನಲ್ಲಿ ಅಗ್ರಸ್ಥಾನ ಪಡೆಯುತ್ತಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಡಾ.ತೋಂಟದಾರ್ಯ ಮಠದ ಹತ್ತಿರ ನಗರ ಸವಿತಾ ಸಮಾಜದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ 25 ನೇ ವಾರ್ಷಿಕೊತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಹಿರಿಯ ನಾಗರಿಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸವಿತಾ ಸಮಾಜದವರು ಅತ್ಯಂತ ಕಷ್ಟಕರ ಜೀವನ ಸಾಗಿಸಿದವರು. ಬಸವಾದಿ ಶರಣರ ತತ್ವ ಸಿದ್ಧಾಂತ ಪರಿಪಾಲನೆ ಮಾಡಿದವರು. ಗ್ರಾಮೀಣ ಪ್ರದೇಶದಲ್ಲಿಯೂ ಶತ ಶತಮಾನಗಳಿಂದ ವೃತ್ತಿಯನ್ನು ಪ್ರೀತಿಸಿ ಗೌರವದಿಂದ ಕಾಯಕ ಮಾಡಿದ ಸಮಾಜ. ಚಿಕ್ಕ ಸಮಾಜವಾದರೂ ಎಲ್ಲರೊಂದಿಗೆ ಮನು ಕುಲದ ಶ್ರೇಯಸ್ಸಿಗೆ ಕಾಯಕ ತತ್ವ ಪರಿಪಾಲನೆ ಮಾಡಿದ ಕೀರ್ತಿ ಸವಿತಾ ಸಮಾಜದಕ್ಕೆ ಸಲ್ಲುತ್ತದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಘವೇಂದ್ರ ಗುರುಜಾಲಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖಂಡರಾದ ಸಂತೋಷ ತಳಕೇರಿ, ಪಾಂಡು ಸಾಹುಕಾರ ದೊಡಮನಿ, ಪಾಲಿಕೆ ಸದಸ್ಯ ಕುಮಾರ ಗಡಗಿ, ಸುನಂದಾ ತೊಳಬಂದಿ ಮಾತನಾಡಿದರು.
ರಾಜುಕುಮಾರ ಬಳ್ಳಾರಿ, ವೆಂಕಟೇಶ ಗುರುಜಾಲಕರ, ಗುರುರಾಜ ಪಂಚಲಿಂಗ, ಸುರೇನ ಗುರುಜಾಲ, ಮನೋಹರ ಗುರುಜಾಲಕರ, ರಾಜು ಸೇಡಂ, ರಾಜಶೇಖರ ದೇವದುರ್ಗ, ಮಲ್ಲಣ್ಣ ಶಿರಶ್ಯಾಡ, ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲಪ್ಪ ಗುರುಜಾಲಕರ, ನಿಲೇಶ ಶಹಪೂರ, ಮಂಜುನಾಥ ಗುರುಜಾಲ, ಸಂತೋಪ ನಾವಿ, ಮಹಾಂತೇಶ ಗುರುಜಾಲಕರ, ಲಕ್ಷ್ಮಿ ಬಳ್ಳಾರಿ, ಉಮೇಶ ಮಂಗಳಗಿ ಮತ್ತಿತರರಿದ್ದರು.