ವಿದ್ಯಾರ್ಥಿಗಳಲ್ಲಿ ಕಠಿಣ ಶ್ರಮದ ಸಾಧನೆ

venugopal
ಪ್ರೇರಣ 2024 ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಾ.ರಂಜಿತ್ ಕುಮಾರ್, ಸೋಮಕ್ಷತ್ರಿಯ ಗಾಣಿಗ ಸಮಾಜ ದುಬೈ ಅಧ್ಯಕ್ಷ ಅರುಣ್ ವಿ., ಉದ್ಯಮಿ ಗಣೇಶ್ ರಾವ್, ಸೂರ್ಯನಾರಾಯಣ ಗಾಣಿಗ, ಡಾ.ಸ್ಪೂರ್ತಿ ಮಟಪಾಡಿ ಇದ್ದರು.
Published on

ಬ್ರಹ್ಮಾವರ: ಬಡತನ ಸಾಧಕರಿಗೆ ವರವಾಗಿ ಪರಿಣಮಿಸಬೇಕು ಎಂದು ಡಾ.ರಂಜಿತ್ ಕುಮಾರ್ ಹೇಳಿದರು. ಬಾರಕೂರಿನಲ್ಲಿ ಶ್ರೀ ವೇಣುಗೋಪಾಲಕೃಷ್ಣ ಎಜುಕೇಶನಲ್ ಸೊಸೈಟಿ ಮೂಡುಕೇರಿ ಬಾರಕೂರು ವತಿಯಿಂದ ಭಾನುವಾರ ಪ್ರೇರಣ 2024 ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಸೋಮಕ್ಷತ್ರೀಯ ಗಾಣಿಗ ಸಮಾಜದ ಉಡುಪಿ, ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಎಸ್ಸೆಸ್ಸೆಲ್ಸಿ 35, ಪಿಯುಸಿ 30, ಪದವಿ ಮತ್ತು ಇಂಜಿನಿಯರಿಂಗ್‌ನ 31 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 8 ಲಕ್ಷದಷ್ಟು ಮೊತ್ತವನ್ನು ಧತ್ತಿನಿದಿಯಿಂದ ನೀಡಲಾಯಿತು.

ಸೋಮಕ್ಷತ್ರಿಯ ಗಾಣಿಗ ಸಮಾಜ ದುಬೈ ಅಧ್ಯಕ್ಷ ಅರುಣ್ ವಿ., ಉದ್ಯಮಿ ಗಣೇಶ್ ರಾವ್, ಸೂರ್ಯನಾರಾಯಣ ಗಾಣಿಗ, ಡಾ.ಸ್ಪೂರ್ತಿ ಮಟಪಾಡಿ, ಸತೀಶ್ ಗಾಣಿಗಾ ಕುಂದಾಪುರ, ರವಿರಾಜ್ ಕುಂಭಾಶಿ, ವಿಜಯ್, ಉದಯ ಕುಮಾರ್ ಉಡುಪಿ, ಜಯಂತಿ ವಾಸುದೇವ್, ಮಾಲತಿ ದಿನೇಶ್, ಅನನ್ಯ ಸಾಲಿಗ್ರಾಮ ಸಮಿತಿ ಗೋಪಾಲ ಕೃಷ್ಣ ಕೋಟೇಶ್ವರ, ನಾರಾಯಣ ಹಂಗಳೂರು ಉಪಸ್ಥಿತರಿದ್ದರು. ಶ್ರೀ ವೇಣುಗೋಪಾಲಕೃಷ್ಣ ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಗಣೇಶ್ ಚಲ್ಲೆಮಕ್ಕಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net