

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಇಲ್ಲಿನ ಕ್ಷತ್ರಿಯ ಮರಾಠ ಸಮಾಜದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಸಮಾಜದ ಹಿರಿಯರಾದ ಉಮೇಶ್ ರಾವ್ ಬಜಗೋಳಿ ಉದ್ಘಾಟಿಸಿದರು. ಕ್ಷತ್ರೀಯ ಮರಾಠ ಸಮಾಜದ ಅಧ್ಯಕ್ಷ ಶುಭದ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಹರೇಂದ್ರ ರಾವ್, ಕೃಷ್ಣ ರಾವ್ ಉಪಸ್ಥಿತರಿದ್ದರು. ಸಮಾಜದ 150 ವಿದ್ಯಾರ್ಥಿಗಳಿಗೆ 1.60 ಲಕ್ಷ ರೂ. ವಿದ್ಯಾರ್ಥಿವೇತನ, ಎಸ್ಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 18 ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಾಥಮಿಕ ವಿಭಾಗದ ಮಕ್ಕಳಿಗೆ ಬ್ಯಾಗ್ ವಿತರಣೆ ನಡೆಯಿತು. ಬಳಿಕ ದಾನಿಗಳಾದ ಡಾ.ಸುಮತಿ ಪವಾರ್, ಪ್ರಕಾಶ್ ಪವಾರ್ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ನಡೆಸಿಕೊಟ್ಟ ರಾಜೇಂದ್ರ ಭಟ್ ಅವರನ್ನು ಗೌರವಿಸಲಾಯಿತು.
ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಗಣೇಶ್ ರಾವ್ ಕವಡೆ, ಜಾನ್‌ದೇವ್ ವೀಡೆ, ಗುಣಪ್ರಕಾಶ್, ಮಾಜಿ ಪುರಸಭಾ ಸದಸ್ಯ ಶಿವಾಜಿ ರಾವ್ ಜಾಧವ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಸನ್ನ ರಾವ್, ಶಿಕ್ಷಕಿ ವಿಶಾಲಾ ಯಶೋಧರ್ ಸ್ವಾಗತಿಸಿದರು. ದಿವ್ಯಾ ಹರೇಂದ್ರ ವಂದಿಸಿದರು. ದಿಶಾ ವಿದ್ಯಾರ್ಥಿಗಳ ವಿವರ ವಾಚಿಸಿದರು. ಹರೇಂದ್ರ ರಾವ್, ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ಗುರುಪ್ರಸಾದ್, ರಾಕೇಶ್, ದರ್ಶನ್, ಅನುಶ್ರೀ ಸಹಕರಿಸಿದರು.