

ಸೋಮವಾರಪೇಟೆ: ತಾಲೂಕಿನ ಗೌಡಳ್ಳಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಚ್.ಆರ್. ಸುರೇಶ್ ಅವರು ವಿದ್ಯಾರ್ಥಿಗಳಾದ ಕೌಶಿಕ್, ಭುವನೇಶ್, ನಾಜೀಯ, ಮಿಥುನ್ ಅವರನ್ನು ಸನ್ಮಾನಿಸಿ, ಬಹುಮಾನ ವಿತರಿಸಿದರು. ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ, ಶಾಲೆಯ ಮಾಜಿ ನಿರ್ದೇಶಕರಾದ ಪುಟ್ಟಸ್ವಾಮಿ, ಸಿಇಒ ಕಿರಣ್, ಸ್ಥಳೀಯರಾದ ವಿಜಯ್‌ಕುಮಾರ್, ಚಿನ್ನಪ್ಪ, ರಾಜಪ್ಪ, ಶಾಲಾ ಮುಖ್ಯಶಿಕ್ಷಕ ಆನಂದಪ್ಪ ಇದ್ದರು.