

ಮಂಗಳೂರು : ಭಾರತದ ಯುವ ಜನತೆಯಲ್ಲಿ ಜ್ಞಾನ ಸಂಪತ್ತಿಗೆ ಕೊರತೆ ಇಲ್ಲ. ಆದರೆ ಸಂಸ್ಕಾರದಿಂದ ಒಳಗೊಂಡ ಜ್ಞಾನವಿದ್ದಾಗ ಆತ ದೇಶಕ್ಕೆ ಆಸ್ತಿಯಾಗುತ್ತಾನೆ ಎಂದು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ವಿದ್ವಾನ್ ರವಿಶಂಕರ್ ಹೆಗಡೆ ದೊಡ್ನಳ್ಳಿ ಹೇಳೀದರು.
ವಿಪ್ರವೇದಿಕೆ ಕೋಡಿಕಲ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು ನಾವು ಆಚರಿಸುವ ಧಾರ್ಮಿಕ ಆಚರಣೆಯನ್ನು ನೋಡಿ ನಮ್ಮ ಮುಂದಿನ ತಲೆಮಾರು ಅದನ್ನು ಅನುಸರಿಸುವಂತೆ ಆಗಬೇಕು ಎಂದರು. ವಿಪ್ರ ವೇದಿಕೆಯ ಕೋಶಾಧಿಕಾರಿ ಕಿಶೋರ್ ಕೃಷ್ಣ , ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯ, ವಿದ್ಯಾ ರಾವ್, ಗಿರೀಶ್ ರಾವ್, ಅವಿನಾಶ್, ಹರಿಪ್ರಸಾದ್ ರಾವ್ ಉಪಸ್ಥಿತರಿದ್ದರು. ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಸ್ಫೂರ್ತಿ ಹಾಗೂ ಗೋಕುಲ ಕೃಷ್ಣ ಪ್ರತಿಭಾ ಪುರಸ್ಕಾರ ಪಡೆದರು. ವೇದಿಕೆಯ ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ದುರ್ಗಾದಾಸ್ ಕಟೀಲು ವಂದಿಸಿದರು.