ಪ್ರತಿಭಾ ಪರಶುರಾಮಪ್ಪಗೆ 13 ಮತ

Untitled design (2)
ಹರಪನಹಳ್ಳಿಯ ಹಿರೇಮೇಗಳಗೆರೆ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಪ್ರತಿಭಾ ಕೆ.ಅವರನ್ನು ಸನ್ಮಾನಿಸಲಾಯಿತು. ಪಿಡಿಒ ಬಿ.ಎಂ.ರೇವಣಸಿದ್ದಪ್ಪ, ಅಂಜಿನಪ್ಪ, ಡಿ.ವೆಂಕಟೇಶ, ಹೊಸಪೇಟೆ ಮಂಜಮ್ಮ, ನೀಲಮ್ಮ, ವಿಶಾಲಮ್ಮ, ಕಾವೇರಿ, ಪಿ.ತಿಮ್ಮಣ್ಣ, ಚಿಕ್ಕಮೇಗಳಗೆರೆ ಪರಶುರಾಮಪ್ಪ ಇತರರಿದ್ದರು.
Published on

ಹರಪನಹಳ್ಳಿ: ತಾಲೂಕಿನ ಹಿರೇಮೇಗಳಗೆರೆ ಗ್ರಾಪಂಗೆ ಅಧ್ಯಕ್ಷರಾಗಿ ಪ್ರತಿಭಾ ಪರಶುರಾಮಪ್ಪ, ಉಪಾಧ್ಯಕ್ಷರಾಗಿ ರೇಖಾ ಕರಿಬಸಪ್ಪ ಶುಕ್ರವಾರ ಆಯ್ಕೆಯಾದರು.


ಒಟ್ಟು 22 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಬಯಸಿ ಪ್ರತಿಭಾ ಪರಶುರಾಮಪ್ಪ ಮತ್ತು ಎಲ್.ಹನುಮಂತಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಕರಿಬಸಪ್ಪ ಮತ್ತು ವಿಶಾಲಾಕ್ಷಮ್ಮ ನಾಮಪತ್ರ ಸಲ್ಲಿಸಿದ್ದರು.

ಪ್ರತಿಭಾ ಪರಶುರಾಮಪ್ಪಗೆ 13 ಮತ, ಎಲ್.ಹನುಮಂತಪ್ಪ 9 ಹಾಗೂ ರೇಖಾ ಕರಿಬಸಪ್ಪ 12, ವಿಶಾಲಾಕ್ಷಮ್ಮ 10 ಮತ ಪಡೆದರು.


ಪಿಡಿಒ ಬಿ.ಎಂ.ರೇವಣಸಿದ್ದಪ್ಪ, ಅಂಜಿನಪ್ಪ, ಡಿ.ವೆಂಕಟೇಶ, ಹೊಸಪೇಟೆ ಮಂಜಮ್ಮ, ನೀಲಮ್ಮ, ವಿಶಾಲಮ್ಮ, ಕಾವೇರಿ, ಪಿ.ತಿಮ್ಮಣ್ಣ, ಚಿಕ್ಕಮೇಗಳಗೆರೆ ಪರಶುರಾಮಪ್ಪ, ಕೃಷ್ಣನಾಯ್ಕ, ರೇಣುಕಮ್ಮ, ಚಂದ್ರಪ್ಪ, ವಿರೂಪಾಕ್ಷಪ್ಪ, ಬಿದರಿ ಹನುಮಂತಪ್ಪ, ವೆಂಕಟೇಶ, ಸಿಂಗ್ರಿಹಳ್ಳಿ ಪರಶುರಾಮ, ಅರುಣ, ಅಂಜಿನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net