ಕಲೆ ಪ್ರದರ್ಶಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

Pratibha Karnji is a great platform to showcase art
ರಬಕವಿ-ಬನಹಟ್ಟಿ ನಗರ ವ್ಯಾಪ್ತಿಯ ಹೊಸೂರಲ್ಲಿ ಹಮ್ಮಿಕೊಂಡ ರಾಮಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಶಿಕ್ಷಕ ಇಲಾಖೆ ಸಹ ನಿರ್ದೇಶಕಿ, ಜಮಖಂಡಿ ಸಿಟಿಇ ಪ್ರಾಚಾರ್ಯರಾದ ಮಂಗಲಾ ನಾಯಕ ಉದ್ಘಾಟಿಸಿದರು. ಬಿಇಒ ಅಶೋಕ ಬಸನ್ನವರ, ಪರಮಾನಂದ ಶ್ರೀಗಳು ಇದ್ದರು.
Published on

ರಬಕವಿ/ಬನಹಟ್ಟಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದು ಶಿಕ್ಷಣ ಇಲಾಖೆ ಸಹ ನಿರ್ದೇಶಕರು, ಜಮಖಂಡಿ ಸಿಟಿಇ ಪ್ರಾಚಾರ್ಯ ಮಂಗಲಾ ನಾಯಕ ಹೇಳಿದರು.

ರಾಮಪುರ ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಹೊಸೂರ ಸಿದ್ಧಾರೂಢ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ ರಾಮಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯ ರೂಪಿಸುವ ಇಲಾಖೆ. ಮಕ್ಕಳ ಪ್ರತಿಭೆ ಹೊರ ಹಾಕುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪಾಲಕರ ಸಹಕಾರವೂ ಅಷ್ಟೇ ಮುಖ್ಯವಾಗಿದೆ. ಸಮಾಜಕ್ಕೆ ಮಕ್ಕಳ ಪ್ರತಿಭೆ ತೋರಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಶಿಕ್ಷಕರ ಜೊತೆ ಪಾಲಕರೂ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಬಿಇಒ ಅಶೋಕ ಬಸನ್ನವರ ಮಾತನಾಡಿ, ಮಗುವಿನ ಪ್ರತಿಭೆ ಹೊರಹಾಕುವುದಕ್ಕೆ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.

ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ. ಮಕ್ಕಳಲ್ಲಿನ ತಾರತಮ್ಯ ಹೋಗಲಾಡಿಸಲು ಇದು ಸಹಕಾರಿಯಾಗುತ್ತದೆ. ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿಯೊಬ್ಬರೂ ಸಹಕರಿಸಿ ಎಂದರು.

ಹೊಸೂರಿನ ಶಂಕರಾನಂದ ಆಶ್ರಮದ ಪರಮಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪಿ. ಟಿ. ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು. ಸಿ. ಎಂ. ನೇಮಗೌಡ, ಮುಖ್ಯಶಿಕ್ಷಕಿ ಮಹಾನಂದಾ ಹೊಸಮಠ, ಅರುಣ ಬುದ್ನಿ, ಬಸವರಾಜ ಹನಗಂಡಿ, ಬಿ. ಎಂ. ಹಳೇಮನಿ, ಬಿ. ಡಿ. ನೇಮಗೌಡ, ಶ್ರೀಶೈಲ ಬುರ್ಲಿ, ಅರ್ಜುನ ಕಾಖಂಡಕಿ, ಮಲ್ಲಿಕಾರ್ಜುನ ಗಡೆನ್ನವರ, ಪ್ರಶಾಂತ ಹೊಸಮನಿ, ಡಿ. ಬಿ. ಜಾಯಗೊಂಡ, ಗುರುಬಾಯಿ ಕಲಬುರ್ಗಿ, ಸಿ. ಎಸ್. ಕಲ್ಯಾಣಿ, ಬಿ. ಬಿ. ಮುಧೋಳ, ಎ. ಜಿ. ಕಡ್ಲಿ, ಜಯಶ್ರೀ ಕಟ್ಟಿಮನಿ, ಸಂತೋಷಿ ರಾಮದುರ್ಗ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net