ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ

21BK2
ಬಸವಕಲ್ಯಾಣ ತಾಲೂಕಿನ ತಳಭೋಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಘೋಟಾಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಗ್ರಾಪಂ ಉಪಾಧ್ಯಕ್ಷ ಸಂಜು ಗಾಯಕವಾಡ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಮಹದೇವ ಮಾನೆ, ಮುಖ್ಯಗುರು ವಿದ್ಯಾವತಿ ರೋಡೆ, ಸಿಆರ್‌ಪಿ ಬಾಲಾಜಿ ಹಿಪ್ಪರಗೆ, ವಿಜಯಕುಮಾರ ಮಾನೆ, ಅಲ್ಲಾವುದ್ದೀನ್ ಪಟೇಲ್, ಸಂತೋಷ ಅಕ್ಕಣ್ಣ, ಬಾಲಾಜಿ ಜಾಧವ್, ಧನಾಂಜೆ ಜಾಧವ್, ಮಹದೇವ ಗಣೇಶ ಇತತರಿದ್ದರು.
Published on

ಬಸವಕಲ್ಯಾಣ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದು ಮೋರಖಂಡಿ ಗ್ರಾಪಂ ಉಪಾಧ್ಯಕ್ಷ ಸಂಜು ಗಾಯಕವಾಡ ಹೇಳಿದರು.

ತಾಲೂಕಿನ ತಳಭೋಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಘೋಟಾಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆ ಆನಾವರಣಕ್ಕೆ ಇಂತಹ ಕಾಐðಕ್ರಮಗಳು ಸಹಕಾರಿಯಾಗುತ್ತವೆ ಎಂದರು.

ಸಿಆರ್‌ಪಿ ಬಾಲಾಜಿ ಹಿಪ್ಪರಗೆ, ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ಮಾನೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕೋಶಧ್ಯಕ್ಷರು ಅಲ್ಲಾವುದ್ದೀನ್ ಪಟೇಲ್ ಮಾತನಾಡಿದರು. ಮುಖ್ಯಗುರು ವಿದ್ಯಾವತಿ ರೋಡೆ ಅಧ್ಯಕ್ಷತೆ ವಹಿಸಿದ್ದರು.

ಎಸ್ಡಿಎಂಸಿ ಅಧ್ಯಕ್ಷ ಮಹದೇವ ಮಾನೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಅಕ್ಕಣ್ಣ, ಗ್ರಾಪಂ ಸದಸ್ಯರಾದ ಬಾಲಾಜಿ ಜಾಧವ್, ಧನಾಂಜೆ ಜಾಧವ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹದೇವ ಗಣೇಶ, ಶಿವಶಂಕರ ಗೌರೆ, ವಸಂತರಾವ ಮಾನೆ, ಅಂಬಣ್ಣ ಸೋನಾರ, ಜ್ಯೋತಿ, ಲಕ್ಷ್ಮೀಬಾಯಿ, ಧನರಾಜ ಮಾನೆ, ಅನುರಾಧಾ ಇದ್ದರು. ದತ್ತಾತ್ರೇಯ ಪವಾರ್ ಸ್ವಾಗತಿಸಿದರು. ವಸಂತ ಮಾನೆ ವಂದಿಸಿದರು. ಭರತ ಹೆಂಬಾಡೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net