ಗಮನ ಸೆಳೆದ ಪ್ರತಿಭಾ ಕಾರಂಜಿ

22 Dwd 7
Published on

ಧಾರವಾಡ: ನಗರದ ಭಾರತ ಪ್ರೌಢಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆಯಿಂದ ೨೦೨೩- ೨೪ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
ಛದ್ಮವೇಷ, ಆಶುಭಾಷಣ, ಕಂಠಪಾಠ, ಅಭಿನಯ ಗೀತೆ, ಕವ್ವಾಲಿ, ಜಾನಪದ ನೃತ್ಯ, ಅಭಿನಯ, ಕ್ಲೇ ್ಲಮÁಡೆಲಿಂಗ್, ರಂಗೋಲಿ, ಹಾಡುಗಾರಿಕೆ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಛದ್ಮವೇಷದಲ್ಲಿ ಸಿದ್ಧಾರೂಢರ ಛದ್ಮವೇಷ ಸ್ಪರ್ಧೆ ಗಮನ ಸೆಳೆಯಿತು. ಹುಬ್ಬಳ್ಳಿ ತಾಲೂಕು ಗಂಗಿವಾಳದ ಜ್ಞಾನ ಸಂಕಲ್ಪ ಶಾಲೆಯ ವಿಶ್ವಾಸ ಎಂಬ ವಿದ್ಯಾರ್ಥಿ ಸಿದ್ಧಾರೂಢರ ಛದ್ಮವೇಷ ಧರಿಸಿ ಎಲ್ಲರ ಗಮನ ಸೆಳೆದನು. ಹುಬ್ಬಳ್ಳಿ ಮಠದಲ್ಲಿರುವ ಸಿದ್ಧಾರೂಢರ ಮೂರ್ತಿಯಂತೆಯೇ ಬಾಲಕ ಗಂಟೆಗಟ್ಟಲೆ ಕುಳಿತಿದ್ದರಿಂದ ಇಲ್ಲಿ ಮೂರ್ತಿಯೇ ಪ್ರತಿಷ್ಠಾಪನೆಗೊಂಡಿದೆ ಎನ್ನುವಷ್ಟು ನೈಜತೆ ಕಂಡುಬ0ತು. ಪ್ರತಿಭಾ ಕಾರಂಜಿ ವೀಕ್ಷಣೆಗೆ ಬಂದಿದ್ದ ಪಾಲಕರು ಮತ್ತು ಸಾರ್ವಜನಿಕರು ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು.
ಇದೇವೇಳೆ ಬೋಽವೃಕ್ಷದಡಿ ತಪಸ್ಸಿಗೆ ಕುಳಿತ ಬುದ್ಧ, ಶ್ರೀಕೃಷ್ಣ, ಶ್ರೀದೇವಿಯ ವೇಷಧಾರಿಗಳು ಗಮನ ಸೆಳೆದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ೨೨ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ೨೬ ಸ್ಪರ್ಧೆಗಳ ಆಯೋಜನೆಗೊಂಡಿದ್ದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net