ಗದಗ ಶಹರದ ಕ್ಲಸ್ಟರ್ ಪ್ರತಿಭಾ ಕಾರಂಜಿ ಉದ್ಘಾಟನೆ, ಸೂಪ್ತವಾದ ಪ್ರತಿಭಾನ್ವೇಷಣೆಯೇ ಪ್ರತಿಭಾ ಕಾರಂಜಿ: ಆರ್.ಎಸ್. ಬುರಡಿ

Buradi BEO-2
Published on

ಗದಗ: ಮಕ್ಕಳಲ್ಲಿಯ ಸೂಪ್ತವಾದ ಪ್ರತಿಭಾನ್ವೇಷಣೆಯೇ ಪ್ರತಿಭಾ ಕಾರಂಜಿ ಕಾರ್ಯಕ್ರಮವಾಗಿದ್ದು, ಇದು ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯಕಾರಿಯಾಗಿದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ ಹೇಳಿದರು.
ಅವರು ಸೋಮವಾರ ಗದುಗಿನ ವಾಸವಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗದಗ ಶಹರದ ಕ್ಲಸ್ಟರ್ ನಂ. ೫ ರ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾ ಕಾರಂಜಿಯು ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವದರ ಜೊತೆಗೆ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವನ್ನು ಉಂಟು ಮಾಡುತ್ತದೆ ಎಂದರು.
ಅತಿಥಿಗಳಾಗಿ ಗದಗ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ.ಮಂಗಳಗುಡ್ಡ, ಉಪಾಧ್ಯಕ್ಷೆ ಆರ್.ಬಿ.ಸಂಕಣ್ಣವರ, ವಾಸವಿ ಶಿಕ್ಷಣ ಸಂಸ್ಥೆಯ ನಿರ್ದೆಶಕರುಗಳಾದ ಮೋಹನ ಬೆಂಗಳೂರು, ರಘುವೀರ ಪತ್ತೇಪೂರ, ಶಂಕ್ರಪ್ಪ ಸಂಪಗಾವಿ, ಬಲರಾಮ ಹೇಮಾದ್ರಿ, ಬಿ.ಆರ್.ಪಿ ಶ್ಯಾಮ್ ಲಾಂಡೆ ಆಗಮಿಸಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿ ಎಚ್.ಎ.ಫಾರೂಕಿ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವದರಿಂದ ಅವರಲ್ಲಿಯ ಪ್ರತಿಭೆಯು ಅನಾವರಣಗೊಳ್ಳುತ್ತದೆ ಇದಕ್ಕೆ ಪ್ರತಿಭಾ ಕಾರಂಜಿಯು ಸೂಕ್ತವಾದ ವೇದಿಕೆಯಾಗಿದೆ ಎಂದರು.
ಮಜುನಾಥ ಹುಯಿಲಗೋಳ, ಬಸವರಾಜ ಮೆಣಸಿನಕಾಯಿ, ಎಚ್.ಆರ್.ಕೋಣಿಮನಿ, ಮೋಹನ ಬೆಂಗಳೂರು, ಸಂತೋಷ ಸರ್ವಿ ಅವರನ್ನು ಸನ್ಮಾನಿಸಲಾಯಿತು.
ವಾಸವಿ ಶಾಲಾ ಮಕ್ಕಳಿಂದ ಪ್ರಾರ್ಥನೆಯಾಯಿತು, ರವಿ ಹೆಬ್ಬಳ್ಳಿ ಸ್ವಾಗತಿಸಿದರು ಕೆ.ಎಸ್.ಬೇಲೇರಿ ನಿರೂಪಿಸಿದರು, ವ್ಹಿ.ಟಿ.ದಾಸರಿ ನಿರ್ವಹಿಸಿದರು. ಪಿ.ಡಿ.ಮಂಗಳೂರು ವಂದಿಸಿದರು.
ಕಾರ್ಯಕ್ರಮದಲ್ಲಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು, ಶಿಕ್ಷಕರು, ಪಾಲಕ ಪೋಷಕರು ಪಾಲ್ಗೋಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net