ಪ್ರತಿಭಾ ಪ್ರದರ್ಶನಕ್ಕೆ ಕ್ರೀಡಾಕೂಟಗಳು ವೇದಿಕೆ

8UK1
ಹಿಡಕಲ್ ಡ್ಯಾಂನಲ್ಲಿ ಹಮ್ಮಿಕೊಂಡಿದ್ದ ಯರಗಟ್ಟಿ ವಲಯಮಟ್ಟದ ಕ್ರೀಡಾಕೂಟದ ಜ್ಯೋತಿಯನ್ನು ಗಣ್ಯರು ಸ್ವೀಕರಿಸಿದರು. ಎಸ್.ಜೆ. ಹೆಬ್ಬಾಳ್ಕರ, ಉದಯಕುಮಾರ ಕಮ್ಮಾರ, ಇರ್ಷಾದ್ ಕಿಲ್ಲೇದಾರ್, ಕೆ.ಆರ್.ಮಹಾತ ಹಾಗೂ ವಿದ್ಯಾರ್ಥಿಗಳು ಇದ್ದರು.
Published on

ಉಳ್ಳಾಗಡ್ಡಿ-ಖಾನಾಪುರ: ಕ್ರೀಡಾಕೂಟಗಳು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆಗಳಾಗಿದ್ದು, ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಬಿ.ಆರ್. ಸರ್ನೋಬತ್ ಹೇಳಿದರು. ಸಮೀಪದ ಹಿಡಕಲ್ ಡ್ಯಾಂ ಎಚ್‌ಡಿಪಿ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಯರಗಟ್ಟಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಕ್ರೀಡೆಗಳು ಆರೋಗ್ಯವರ್ಧಕಗಳಾಗಿವೆ ಎಂದರು. ಹಿರಿಯ ಸಾಹಿತಿ ಕಾ.ಹೊ.ಶಿಂಧೆ ಮಾತನಾಡಿ, ಸೋಲು ಗೆಲುವಿನ ಸೋಪಾನವಾಗಿದ್ದು, ಕ್ರೀಡಾ ಮನೋಭಾವದಿಂದ ಆಟ ಆಡಬೇಕು ಎಂದರು. ಮುಖ್ಯಶಿಕ್ಷಕಿ ಎಸ್.ಜೆ. ಹೆಬ್ಬಾಳ್ಕರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಉದಯಕುಮಾರ ಕಮ್ಮಾರ, ಶಿಕ್ಷಕಿ ವಿ.ಡಿ.ಮ್ಯಾಗೇರಿ, ಗ್ರಾಪಂ ಸದಸ್ಯ ಇರ್ಷಾದ್ ಕಿಲ್ಲೇದಾರ್, ಕೆ.ಆರ್.ಮಹಾತ, ಪೃಥ್ವಿ ಪಾಟೀಲ, ರಂಜಿತಾ ಹುದ್ದಾರ, ಎಸ್.ಆರ್. ಕುಂದರಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net