ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ

NOUKARARA SANGHA
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಹಾಗೂ 2022-23ನೇ ಸಾಲಿನ ಸರ್ವಸಾಧಾರಣ ಸಭೆಯನ್ನು ಸಿ.ಎಸ್. ಷಡಾಕ್ಷರಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಟಿ ಭೂಬಾಲನ್, ಸುರೇಶ ಶೆಡಶ್ಯಾಳ, ಸಂಗಮೇಶ ಬಬಲೇಶ್ವರ, ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ರತಿಯೊಬ್ಬರಲ್ಲೂ ಅಗಾಧ ಪ್ರತಿಭೆ ಅಡಗಿದ್ದು ಅದರ ಸದುಪಯೋಗವಾಗಬೇಕು. ಜೀವನದಲ್ಲಿ ಏನಾದರೂ ಸಾಧಿಸುತ್ತೇನೆ ಎಂಬ ಛಲ ಇರಬೇಕು. ಆಗ ಮಾತ್ರ ಯಶಸ್ವಿ ಜೀವನಕ್ಕೆ ನಾಂದಿಯಾಗಲಿದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ 2022-23ನೇ ಸಾಲಿನ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸದಾ ಓದಿನ ಕಡೆ ಗಮನ ಹರಿಸಬೇಕು. ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಬಹಳಷ್ಟು ಪ್ರತಿಭೆಗಳು ಹೊರ ಹೊಮ್ಮುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಓದಿನೊಂದಿಗೆ ಉತ್ಕೃಷ್ಟ ಮಟ್ಟದಲ್ಲಿ ಹುದ್ದೆ ಗಳಿಸಿ ತಂದೆ ತಾಯಿ ಋಣ ತೀರಿಸುವುದರೊಂದಿಗೆ ಸಮಾಜಮುಖಿಯಾಗಬೇಕೆಂದರು.

ಉದ್ಘಾಟನೆ ನೆರವೇರಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ನಮ್ಮ ಸರ್ಕಾರಿ ನೌಕರರ ಸಂಘವು ನೌಕರರ ಅನುಕೂಲಕ್ಕಾಗಿ ಹಲವಾರು ಹೋರಾಟಗಳ ಮೂಲಕ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನೌಕರರ ಹಿತ ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಬೇಡಿಕೆಗಳಿಗೆ ಧ್ವನಿಯಾಗುತ್ತೇನೆ ಎಂದರು.

ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸಾಧನೆಗಳನ್ನು ವಿವರಿಸಿದರು.
ಅಮ್ಮನ ಮಡಿಲು ಟ್ರಸ್ಟ್‌ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಭಾರತ ಸ್ಕೌಟ್ಸ್ ಗೈಡ್ಸ್‌ನ ಆಯುಕ್ತ ಸಿದ್ದಣ್ಣ ಸಕ್ರಿ ಮಾತನಾಡಿದರು. ಜಿಲ್ಲಾ ಖಜಾನೆ ಅಧಿಕಾರಿ ಹನುಮಂತ ಕಾಲತಿಪ್ಪಿ, ನೌಕರರ ಸಂಘದ ಜಿಲ್ಲಾ ಖಜಾಂಚಿ ಜುಬೇರ ಕೆರೂರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ, ವಿಶ್ವನಾಥ ಬೆಳ್ಳೆನವರ, ಗಂಗಾಧರ ಜೇವೂರ, ಶಿವರಾಜ ಬಿರಾದಾರ, ನಿಜಪ್ಪ ಮೇಲಿನಕೇರಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್. ಬೇವನೂರ, ನಿಕಟಪೂರ್ವ ಜಿಲ್ಲಾಧ್ಯಕ್ಷ ಬಿ.ಟಿ. ಗೌಡರ, ಎಸ್.ಎಸ್. ಮಂಗಾನವರ, ಅಶೋಕ ತೆಲ್ಲೂರ, ಎಸ್.ಬಸವರಾಜು, ಸದಾನಂದ ನೆಲಕುದ್ರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net