

ಹೆಬ್ರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂಸ್ಕೃತ ವಿಷಯದಲ್ಲಿ 125 ಅಂಕ ಪಡೆದ ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ ಆಂಗ್ಲ ವಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಾದ ಪೂರ್ವಿ ಎಂ.ರಾವ್, ಸುರಭಿ ಹೆಬ್ಬಾರ್, ಭಾರ್ಗವ್ ಅಡಿಗ, ವನುಷಾ ಪೂಜಾರಿ, ಪೃಥ್ವಿ ಎಂ.ಆಚಾರ್ಯ, ಸ್ತುತಿ ಕುಲಾಲ್ ಅವರನ್ನು ಗೌರವಿಸಲಾಯಿತು.
ಉಡುಪಿ ಪರ್ಯಾಯ ಪುತ್ತಿಗೆ ಮಠ ಮತ್ತು ಉಡುಪಿ ಜಿಲ್ಲಾ ಸಂಸ್ಕೃತ ಅಧ್ಯಾಪಕರ ಸಂದ ಸಹಯೋಗದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಗೌರವಿಸಿದರು. ಅಮೃತ ಭಾರತಿ ವಿದ್ಯಾಲಯದ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ಪಾಲಕರು ಉಪಸ್ಥಿತರಿದ್ದರು.