ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ: ರಡ್ಡೇರ

13GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳು ಸೃಜನಶೀಲ ವ್ಯಕ್ತಿತ್ವದ ಪುಷ್ಪಗಳು. ಮುಗ್ಧ ಮಕ್ಕಳ ಮನಸ್ಸಿನ ಭಾವನೆಗಳಿಗೆ ಅಭಿವ್ಯಕ್ತಿ ರೂಪ ನೀಡಿ ಅವರನ್ನು ಸೃಜನತೆ ಕಡೆ ಕರೆದೊಯ್ಯವ ವೇದಿಕೆಯೇ ಪ್ರತಿಭಾ ಕಾರಂಜಿ ಎಂದು ಜಿಲ್ಲಾ ಶಾಲಾ ಶಿಣ ಇಲಾಖೆಯ ಉಪನಿರ್ದೆಶಕ ಎಂ.ಎ.ರಡ್ಡೇರ ಹೇಳಿದರು.
ಬುಧವಾರ ಬೆಟಗೇರಿಯ ಸೆಂಟ್​ ಜಾನ್ಸ್​ ಶಾಲೆಯ ಆವರಣದಲ್ಲಿ ಜಿ.ಪಂ ಗದಗ, ಶಾಲಾ ಶಿಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಥಿರ್ಗಳ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ. ಇಲ್ಲಿ ನಿರ್ಣಾಯಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಲ್ಲಿರುವ ಉತ್ಸಾಹ ಚಿಮ್ಮಿ ಪ್ರತಿಭಾ ಕಾರಂಜಿ ಸಂತಸದಾಯಕ ಆಗಿರಲಿ ಎಂದರು.
ಜಿಲ್ಲಾ ಡೈಟ್​ ಪ್ರಾಚಾರ್ಯ ಜಿ.ಎಲ್​.ಬಾರಾಟಕ್ಕೆ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ವೇದಿಕೆ ನಿರ್ಣಾಯಕ ಪಾತ್ರ ವಹಿಸುವದು. ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಬೇಕು ಎಂದರು.
ಶಹರ ೇತ್ರ ಶಿಣಾಧಿಕಾರಿ ಆರ್​. ಎಸ್​. ಬುರಡಿ ಮಾತನಾಡಿ, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಕಲೆ, ಸಾಹಿತ್ಯದ ಅಭಿರುಚಿಯೊಂದಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆದು ಬರುವಲ್ಲಿ ಈ ವೇದಿಕೆ ಮೆಟ್ಟಿಲು ಆಗಿ ಸ್ಪೂತಿರ್ ತುಂಬಲಿ ಎಂದರು.
ವಿವಿಧ ೇತ್ರಗಳಲ್ಲಿ ಸಾಧನೆಗೈದ ಮಕ್ಕಳಾದ ಗಂಗಾಧರ ಸಾಠೆ, ವಿಶ್ವನಾಥ ಹುನಗುಂದ, ಸಮನ್ವಿತ ದೊಟವಾಡ ಅವರನ್ನು ಶಿಕರ ಸಂಟನೆಯಿಂದ ಸನ್ಮಾನಿಸಲಾಯಿತು.
ಎಂ. ಎಚ್​. ಕಂಬಳಿ, ಎಚ್​. ಎ. ಾರೂಖಿ, ಾದರ್​ ಜೇಕಬ್​ ಅಂಟೋನಿ, ರಾಚಪ್ಪ ಅರುಳಪ್ಪ, ಮೇರಿ ಮಸ್ಕ್ಕರೇನಸ್​, ಎಚ್​. ಎಸ್​. ಜಿನಗಾ, ಚಂದ್ರು ಕರಿಸೋಮನಗೌಡ್ರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net