ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು : ದಯಾನಂದ ಕತ್ತಲ್‌ಸಾರ್ ಕಿವಿಮಾತು

New Project (43)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸಂಗೀತ, ಸಾಹಿತ್ಯ, ರಸಿಕತೆ ಸೇರುವ ಸಂಸ್ಕಾರ ನಮ್ಮ ಬದುಕಿನಲ್ಲಿರಬೇಕು. ಸಂಭ್ರಮದ ಸತ್ವವನ್ನು ಸ್ವೀಕರಿಸಿ ನ್ಯೂನತೆಯನ್ನು ಹೊರಗೆಸೆಯಬೇಕು, ವಿದ್ಯಾರ್ಥಿಗಳು ಡ್ರಗ್ಸ್ ವಾಫಿಯಾ ದುಶ್ಚಟಗಳಿಂದ ದೂರ ಇದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು. ಮಂಗಳೂರು ವಿ.ವಿ. ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ ಮತ್ತು ಪ್ರತಿಭಾ ಪ್ರದರ್ಶನ ‘ವೈಭವ-25’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಾತನಾಡಿದರು. ಅಧ್ಯಕ್ಷತೆ ವಹಿಸಿದ ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಾತನಾಡಿ, ಸತತ ಪ್ರಯತ್ನ, ಪರಿಶ್ರಮಗಳು ಸಾಧನೆಯ ಮೆಟ್ಟಿಲುಗಳಾಗುತ್ತವೆ. ಉತ್ತಮ ಅವಕಾಶಗಳು ಸಿಕ್ಕಾಗ ಎಲ್ಲರೂ ಬಳಸಿಕೊಳ್ಳಬೇಕು ಎಂದರು. ಮಂಗಳೂರು ವಿ.ವಿ. ಕುಲಸಚಿವ ಕೆ.ರಾಜು ಮೊಗವೀರ ಹಾಗೂ ವಿದ್ಯಾರ್ಥಿ ಸಂದ ಅಧ್ಯಕ್ಷ ಮದನ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ.ಪ್ರಶಾಂತ್ ನಾಯ್ಕ ಪ್ರಸ್ತಾವಿಸಿದರು. ಶ್ರೇಯಸ್ ಹಾಗೂ ರಕ್ಷಾ ನಿರೂಪಿಸಿದರು. ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಕಾರ್ತಿಕ್ ವಂದಿಸಿದರು.

ಜೀವನದಲ್ಲಿ ಮಾನವೀಯ ಮೌಲ್ಯಗಳೊಂದಿಗೆ ಕೃತಜ್ಞತಾ ಮನೋಭಾವ ನಮ್ಮದಾಗಬೇಕು. ನಾವು ಸಾಗಿ ಬಂದ ಹಾದಿ ಮರೆಯದೆ ಸಮಾಜಕ್ಕೆ ನಮ್ಮದೇ ಕೊಡುಗೆ ನೀಡುವ ಮನಸ್ಸು ವಿದ್ಯಾರ್ಥಿಗಳಲ್ಲಿರಬೇಕು. ದಯಾನಂದ ಕತ್ತಲ್‌ಸಾರ್, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ https://www.vijayavani.net/chinganigudde-daivasthana-invitation-released https://www.vijayavani.net/gone-muhurta

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net