

ಲಕ್ಷ್ಮೇಶ್ವರ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಿ.ಎಚ್. ಪಾಟೀಲ ಹೇಳಿದರು.
ಪಟ್ಟಣದ ಬಿಸಿಎನ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರುಗಿದ ಲಕ್ಷ್ಮೇಶ್ವರ ಉತ್ತರ ಮತ್ತು ಮಾಗಡಿ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾ ಕಾರಂಜಿ ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸಲಾಗುತ್ತದೆ ಎಂದರು.
ಶಿರಹಟ್ಟಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎಂ. ಯರಗುಪ್ಪಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ಎಂ. ಗುತ್ತಲ ಮಾತನಾಡಿದರು. ಸ್ಪರ್ಧೆಯಲ್ಲಿ 13 ಪ್ರಾಥಮಿಕ ಶಾಲೆಗಳು ಮತ್ತು 11 ಪ್ರೌಢಶಾಲೆಗಳ ಮಕ್ಕಳು ಭಾಗವಹಿಸಿದ್ದರು.
ಬಿಸಿಎನ್ ಸ್ಪೆಕ್ಟ್ರಂ ಆಡಳಿತಾಧಿಕಾರಿ ನಾಗರಾಜ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಎಫ್.ಎಸ್. ತಳವಾರ, ಗೀತಾ ಹಳ್ಯಾಳ, ವಿ.ಎಚ್. ದೀಪಾಳಿ, ಮುಖ್ಯ ಶಿಕ್ಷಕರಾದ ವೀರೇಶ ಕಮ್ಮಾರ, ಎಸ್.ಡಿ. ಲಮಾಣಿ, ಎಚ್.ಎಂ. ಗುತ್ತಲ, ಕ್ಲಸ್ಟರ್ ಸಿಆರ್‌ಪಿ ಯವರಾದ ಉಮೇಶ ನೇಕಾರ ಮತ್ತು ಕೆ.ಪಿ. ಕಂಬಳಿ, ಎನ್.ಎನ್. ಸಾವಿರಕುರಿ, ಎನ್.ಎ. ಮುಲ್ಲಾ, ಸತೀಶ ಬೋಮಲೆ, ಸಿ.ವಿ. ವಡಕಣ್ಣವರ, ಗಿರೀಶ ನೇಕಾರ, ಜ್ಯೋತಿ ಗಾಯಕವಾಡ, ಲೋಕೇಶ ಮಠದ, ಎನ್.ಎನ್. ಶಿಗ್ಲಿ, ಎಚ್.ಡಿ. ನಿಂಗರೆಡ್ಡಿ, ಡಿ.ಸಿ. ಪತ್ತಾರ, ಎನ್.ಎಸ್. ಬಂಕಾಪೂರ ಹಾಗೂ ಕ್ಲಸ್ಟರಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.