ಶಿಸ್ತು, ಶ್ರಮ, ಗುರಿಯಿಂದ ಯಶಸ್ಸು - ಶಾಸಕ ಅಶೋಕ್ ರೈ ಅನಿಸಿಕೆ - ತಾಲೂಕುಮಟ್ಟದ ಪ್ರತಿಭಾ ಕಾರಂಜಿ

PTR_9 NOV_6
Published on

ವಿಟ್ಲ: ವಿದ್ಯೆ, ಆರೋಗ್ಯ, ಉದ್ಯೋಗ ಮನುಷ್ಯನಿಗೆ ಮುಖ್ಯವಾಗಿದ್ದು, ಅದರ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಶಿಸ್ತು, ಶ್ರಮ, ಗುರಿ ಇಟ್ಟುಕೊಂಡಾಗ ಯಶಸ್ಸು ಲಭಿಸುತ್ತದೆ. ಹಿಂಜರಿಕೆಯಿಲ್ಲದೆ ಮುಂದೆ ಬರುವ ಕಾರ್ಯ ಯುವ ಸಮುದಾಯದಿಂದ ಆಗಬೇಕಾಗಿದೆ. ಉತ್ತಮ ವಿದ್ಯಾಭ್ಯಾಸವಿದ್ದವರು ರಾಜಕೀಯಕ್ಕೆ ಬಂದಾಗ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅಳಿಕೆ ಬಾಲಕುಟೀರದಲ್ಲಿ ದಕ್ಷಿಣ ಕನ್ನಡ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಽಕಾರಿಯವರ ಕಚೇರಿ, ಕ್ಷೇತ್ರ ಸಮನ್ವಯಾಽಕಾರಿಯವರ ಕಚೇರಿ ಬಂಟ್ವಾಳ ಹಾಗೂ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢಶಾಲೆ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಸಂಚಾಲಕ ಎಸ್. ಚಂದ್ರಶೇಖರ ಭಟ್, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಸದಸ್ಯ ಸದಾಶಿವ ಮಡಿಯಾಲ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢಶಾಲಾ ಮುಖ್ಯಶಿಕ್ಷಕ ರಘು ಟಿ. ವೈ ಮತ್ತಿತರರು ಉಪಸ್ಥಿತರಿದ್ದರು.

ಪ್ರಭಾರ ಕ್ಷೇತ್ರ ಸಮನ್ವಯಾಽಕಾರಿ ವಿದ್ಯಾಕುಮಾರಿ ಸ್ವಾಗತಿಸಿದರು. ಪ್ರತಿಭಾ ಕಾರಂಜಿ ನೋಡೆಲ್ ಅಽಕಾರಿ ಪ್ರತಿಮಾ ವೈ.ವಿ. ವಂದಿಸಿದರು. ಶಿಕ್ಷಣ ಇಲಾಖೆಯ ಸುರೇಖ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.

೧೮೨ ಶಾಲೆಗಳು ಭಾಗಿ

ಮಂಚಿ ವಲಯದ ೪೩, ಕಲ್ಲಡ್ಕ ವಲಯದ ೧೯, ವಿಟ್ಲ ವಲಯದ ೫೦, ಬಂಟ್ವಾಳ ನಗರ ವಲಯದ ೨೭, ವಾಮದಪದವು ವಲಯದ ೪೩ ಶಾಲೆಗಳು ಸೇರಿ ಒಟ್ಟು ೧೮೨ ಶಾಲೆಗಳ ಸುಮಾರು ೧೦೪೫ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ೬೦ ಕೊಠಡಿ ನಿರ್ವಾಹಕರು, ೩೬೪ ವಿದ್ಯಾರ್ಥಿಗಳು ಸಮಗ್ರ ನಿರ್ವಹಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net