

ಸುಬ್ರಹ್ಮಣ್ಯ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳಗೋಡಿನಲ್ಲಿ ನಡೆದ ಹರಿಹರ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಮಕಾರುನ ವಿದ್ಯಾರ್ಥಿಗಳಿಗೆ ಕಿರಿಯ ಮತ್ತು ಹಿರಿಯ ವಿಭಾಗದ ಸಮಗ್ರ ಪ್ರಶಸ್ತಿ ಲಭಿಸಿದೆ. ಕಿರಿಯ ವಿಭಾಗದಲ್ಲಿ ಪ್ರಥಮ, ಹಿರಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಅಂಕಗಳ ಆಧಾರದಲ್ಲಿ ಅವಳಿ ಸಮಗ್ರ ಪುರಸ್ಕಾರ ಗಳಿಸಿದೆ.
ಕಿರಿಯರ ವಿಭಾಗ: ಕಿರಿಯರ ವಿಭಾಗದ ಛದ್ಮವೇಷದಲ್ಲಿ ಹಂಸಿಕ ಪ್ರಥಮ, ಅಭಿನಯ ಗೀತೆಯಲ್ಲಿ ರಕ್ಷಿತಾ ಎ.ಯು.ಪ್ರಥಮ, ಕ್ಲೇ ಮಾಡಲಿಂಗ್ ಮೋಕ್ಷಿತಾ ಪ್ರಥಮ, ಭಕ್ತಿಗೀತೆಯಲ್ಲಿ ನಿಖಿತ ಡಿ.ತೃತೀಯ, ಸಂಸ್ಕೃತ ಧಾರ್ಮಿಕ ಪಠಣ ಆರಾಧ್ಯ ಕೆ.ಪ್ರಥಮ, ಚಿತ್ರಕಲೆಯಲ್ಲಿ ಯಶಿಕ ಎಂ.ಕೆ.ತೃತೀಯ, ಆಶುಭಾಷಣದಲ್ಲಿ ಯಶಸ್ ಪಿ.ವೈ.ದ್ವಿತೀಯ ಹಾಗೂ ಕನ್ನಡ ಕಂಠಪಾಠದಲ್ಲಿ ಚಿತ್ರಾಕ್ಷಿ ಕೆ.ಡಿ.ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಿರಿಯರ ವಿಭಾಗ: ಹಿರಿಯರ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣ ಮತ್ತು ಕವನ ವಾಚನದಲ್ಲಿ ಕ್ಷಮಾ ಡಿ.ಪ್ರಥಮ ಮತ್ತು ದ್ವಿತೀಯ, ಚಿತ್ರಕಲೆ ನಿಶಾ ಎಂ.ಪಿ.ದ್ವಿತೀಯ, ಅಭಿನಯ ಗೀತೆ ಮತ್ತು ದೇಶಭಕ್ತಿ ಗೀತೆಯಲ್ಲಿ ಅನ್ವಿತ ಕೆ.ಎಸ್ ಪ್ರಥಮ ಮತ್ತು ದ್ವಿತೀಯ, ಭಕ್ತಿ ಗೀತೆಯಲ್ಲಿ ಕೀರ್ತಿ ಪ್ರಥಮ, ಮಿಮಿಕ್ರಿ ಚಂಪಕ್ ಕೆ.ಎಂ.ಪ್ರಥಮ ಮತ್ತು ಕ್ಲೇ ಮಾಡಲಿಂಗ್ ತೃತೀಯ, ಪ್ರಬಂಧ ರಚನೆ ಆರಾಧ್ಯ ಕೆ.ಎಸ್ ತೃತೀಯ, ಹಿಂದಿ ಕಂಠಪಾಠ ದಿವೀಶ್ ಗೌಡ ಜೆ.ಆರ್.ದ್ವಿತೀಯ ಮತ್ತು ಕನ್ನಡ ಕಂಠಪಾಠ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.