

ಮಂಡ್ಯ: ಅಧ್ಯಯನ ಶೀಲತೆಯಿಂದ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಏನನ್ನೂ ಸಾಧಿಸಲಾಗದು ಎಂದು ವಕೀಲ ಬಸವಯ್ಯ ಅಭಿಪ್ರಾಯಪಟ್ಟರು.
ನಗರದ ಪಿಇಎಸ್ ಕಾನೂನು ಕಾಲೇಜಿನಲ್ಲಿ ಪಿಇಟಿ ಮತ್ತು ಪಿಇಎಸ್ ಕಾನೂನು ಕಾಲೇಜು ವತಿಯಿಂದ ನ್ಯಾಯಾಧೀಶ ಕೆ.ಸಿ.ಲಿಂಗೇಗೌಡ ಸ್ಮರಣಾರ್ಥ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸವಾರೋಪ ಸವಾರಂಭದ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಜೀವನ ಇಂದು ವ್ಯಾಪಾರೀಕರಣವಾಗಿದೆ. ಇದರಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಇದೆ. ಇಂಥ ಸಂದರ್ಭದಲ್ಲಿ ಸತತ ಅಧ್ಯಯನಶೀಲರಾದರೆ ವಾತ್ರ ಎಲ್ಲವನ್ನೂ ಪಡೆಯಲು ಸಾಧ್ಯ. ಕಾನೂನನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಅಷ್ಟೇ ಸಾಲದು ಪ್ರತಿಯೊಂದು ಪದವನ್ನೂ ಅರ್ಥವಾಡಿಕೊಂಡಲ್ಲಿ ವಾತ್ರ ಭಾಷಾ ಪ್ರೌಢಿಮೆ ಬೆಳೆಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಪುಸ್ತಕ, ಪತ್ರಿಕೆ ಯಾವುದಾದರೂ ಸರಿ. ಸಮಯ ಸಿಕ್ಕಾಗಲೆಲ್ಲ ನಾವು ಓದುವುದನ್ನು ಅಭ್ಯಾಸ ವಾಡಿಕೊಳ್ಳಬೇಕು. ಇದರಿಂದ ಪದಗಳ ಅರ್ಥ ನಮಗಾಗುತ್ತದೆ. ನಾವು ಅದರಲ್ಲಿ ಹಿಡಿತ ಸಾಧಿಸಬಹುದು. ಇಲ್ಲದಿದ್ದರೆ ಪ್ರತಿಯೊಂದಕ್ಕೂ ಬೇರೆಯವರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಹೇಳಿದರು.
ನಾವು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ತುಂಬ ಕಷ್ಟಕರವಾಗಿತ್ತು. ಶಾಲಾ-ಕಾಲೇಜುಗಳು ಸರಿಯಾಗಿ ಇರಲಿಲ್ಲ. ಇದ್ದರೂ ಅದರಲ್ಲಿ ಸೌಲಭ್ಯಗಳು ಸಿಗುತ್ತಿರಲಿಲ್ಲ. ಆದರೆ ಇಂದು ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳೂ ಕೈಗೆಟುಕುತ್ತವೆ. ಕುಳಿತಲ್ಲೇ ಜಗತ್ತನ್ನು ಕಾಣಬಹುದಾಗಿದೆ ಅಂಥ ವ್ಯವಸ್ಥೆ ಇಂದು ಲಭ್ಯವಿದೆ. ಇದೆಲ್ಲವನ್ನೂ ಸದ್ಬಳಕೆ ವಾಡಿಕೊಂಡು ಜೀವನದಲ್ಲಿ ಒಳ್ಳೆಯ ಬೆಳವಣಿಗೆ ಕಾಣಬೇಕು ಎಂದು ಸಲಹೆ ನೀಡಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಎ.ಎಂ.ನಳಿನಿಕುವಾರಿ, ಪಿಇಟಿ ಜಂಟಿ ಕಾರ್ಯದರ್ಶಿ ಕೆ.ಆರ್. ದಯಾನಂದ, ಪ್ರಾಂಶುಪಾಲ ಡಾ.ಜೆ.ಯೋಗೀಶ್, ಸಾಂಸ್ಕೃತಿಕ ಸಂಚಾಲಕ ಎನ್.ಸಿ. ಸುಭಾಷ್, ಯಮುನಾವತಿ, ಡಾ.ಕೆ.ಎಸ್.ಜಯಕುವಾರ್, ಎಂ.ಪಿ.ಪ್ರಮೋದ್‌ಕುವಾರ್ ಇತರರಿದ್ದರು.