ದೇಶದ ಘನತೆ ಎತ್ತಿಹಿಡಿಯುವ ಕೆಲಸವಾಗಲಿ: ವಾಗ್ಮಿ ಹಿರೇಮಗಳೂರು ಕಣ್ಣನ್ ಸಲಹೆ

18_09_Mdy_04(Prathiba Puraskara)
Published on

ಮಂಡ್ಯ: ಮನುಷ್ಯ ತನ್ನ ಚಿಂತನೆಯೊಂದಿಗೆ ದೇಶದ ಘನತೆಯನ್ನು ಎತ್ತಿಹಿಡಿಯುವ ಕೆಲಸ ವಾಡಬೇಕು. ಅಂತಹ ಮಹತ್ತರ ಕೆಲಸವನ್ನು ಸರ್ ಎಂ.ವಿಶ್ವೇಶ್ವರಯ್ಯ ವಾಡಿದ್ದಾರೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.

ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್‌ಎಂವಿ ಅವರು ಒಮ್ಮೆ ವಿದೇಶ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ನ್ಯೂಜೆರ್ಸಿಯಲ್ಲಿ ಸ್ಥಾಪಿತವಾಗಿದ್ದ ವಿದ್ಯುತ್ ಉಪಕರಣಗಳ ಟಕದಲ್ಲಿನ ಪರಿಹಾರವಾಗದ ಸಮಸ್ಯೆಯನ್ನು ಪರಿಹರಿಸಿದ್ದರು. ಆ ಮೂಲಕ ಭಾರತದ ಕೀರ್ತಿಯನ್ನೂ ಎತ್ತಿ ಹಿಡಿದರು ಎಂದು ಸ್ಮರಿಸಿದರು.

ಮೈಸೂರು ಅರಸ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ದಿವಾನರಾಗಿದ್ದ ವಿಶ್ವೇಶ್ವರಯ್ಯ ಅವರು ಹತ್ತು ಹಲವು ನೀರಾವರಿ ಯೋಜನೆಗಳನ್ನು ಸ್ಥಾಪಿಸಿ ರೈತಾಪಿ ವರ್ಗಕ್ಕೆ ನೆರವಾದರು. ಅದೇ ರೀತಿ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ರೈತ ಮಕ್ಕಳಿಗೆ ಉದ್ಯೋಗದಾತರಾದರು. ಮಹಾರಾಜರ ಆದೇಶಾನುಸಾರ ಶೈಕ್ಷಣಿಕ ಸಂಸ್ಥೆಗಳನ್ನೂ ಸ್ಥಾಪಿಸಿ ಶಿಕ್ಷಣಕ್ಕೂ ಒತ್ತು ನೀಡಿದರು. ಇಂತಹ ಮಹನೀಯರು ಎಂದೆಂದಿಗೂ ಪ್ರಾತಃಸ್ಮರಣೀಯರು ಎಂದು ಹೇಳಿದರು.

ಬ್ರಾಹ್ಮಣ ಸಭಾದ ಜಿಲ್ಲಾಧ್ಯಕ್ಷ ಸದಾಶಿವಭಟ್, ಉಪಾಧ್ಯಕ್ಷ ಗೋಪಾಲ್, ಕಾರ್ಯದರ್ಶಿ ಶಂಕರನಾರಾಯಣಶಾಸಿ, ಸಹಕಾರ್ಯದರ್ಶಿ ಬಿ.ಜಿ.ಉವಾ, ವಿಜಯಲಕ್ಷ್ಮೀ, ಎಂ.ಆರ್. ಯೋಗಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net