ಮಾಚಿದೇವರ ಆದರ್ಶ ಮೈಗೂಡಿಸಿಕೊಳ್ಳಿ: ಶ್ರೀಕರಿಂಜೆಮಠದ ಮುಕ್ತಾನಾಂದ ಸ್ವಾಮೀಜಿ ಸಲಹೆ

Madivala
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಮಡಿವಾಳ ವಾಚಿದೇವ ಅವರ ವೀರತ್ವ ಮತ್ತು ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಮೂಡಬಿದರೆ ಶ್ರೀಕರಿಂಜೆಮಠದ ಪೀಠಾಧ್ಯಕ್ಷ ಮುಕ್ತಾನಾಂದ ಸ್ವಾಮೀಜಿ ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಡಿವಾಳ ವಾಚಿದೇವರ ಸಂದಿಂದ ಆಯೋಜಿಸಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸ್ಥಳೀಯ ಸಂಸ್ಥೆ ಸದಸ್ಯರಿಗೆ ಅಭಿನಂದನಾ ಸವಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಮಡಿವಾಳ ಸವಾಜ ಅಭಿವೃದ್ಧಿಯಾಗದಿರುವುದಕ್ಕೆ ಮೂಲ ಕಾರಣ ಮಡಿವಾಳ ವಾಚಿದೇವ ಅವರ ಆದರ್ಶಗಳನ್ನು ಅರ್ಥವಾಡಿಕೊಳ್ಳದಿರುವುದು. ಅಂತೆಯೇ ವೀರತ್ವ ಮತ್ತು ಪೌರುಷತ್ವವನ್ನು ಅರಿಯದಿರುವುದಾಗಿದೆ ಎಂದು ಎಚ್ಚರಿಸಿದರು.

ಸಂಟನೆಯಲ್ಲಿ ಒಡಕು, ಒಗ್ಗೂಡುವ ಮನಸ್ಥಿತಿ ಇಲ್ಲದಿರುವುದು, ಸವಾಜ ಕಟ್ಟಲು ಬಂದವನ್ನು ದೂಷಿಸುವ ದುರ್ಗುಣಗಳೇ ಉದ್ಧಾರವಾಗದಿರಲು ಕಾರಣ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಸಾಧಿಸುವುದು ಇನ್ನೂ ಯಾವಾಗ ಎಂದು ಪ್ರಶ್ನಿಸಿದ ಅವರು,

ಮುಂದಿನ ದಿನಗಳಲ್ಲಿ ಮಡಿವಾಳ ಸವಾಜವು ಸದೃಢವಾಗಿ ಬೆಳೆಯಲು ಸಂಟನೆ, ಸವಾಜ, ಸಂತರು ಈ ಮೂರು ಒಟ್ಟಿಗೆ ಸಾಗಬೇಕಿದೆ. ಆಗ ವಾತ್ರ ಸಮಗ್ರ ಅಭಿವೃದ್ದಿಯಾಗಲಿಕ್ಕೆ ಸಾಧ್ಯವಿದೆ ಎಂದರು.

ವಾಜಿ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ವಾತನಾಡಿ, ಸಾವಾಜಿಕ ವ್ಯವಸ್ಥೆಯಲ್ಲಿ ಮಡಿವಾಳ ಸವಾಜ ಅತ್ಯಂತ ಶೋಚನೀಯವಾಗಿ ಹಿಂದುಳಿದಿದೆ. ಸರ್ಕಾರ ಉತ್ತಮ ಯೋಜನೆಗಳನ್ನು ನೀಡುವ ಮೂಲಕ ಅಭಿವೃದ್ದಿಗೆ ಆದ್ಯತೆ ನೀಡಬೇಕಿದೆ ಎಂದರು.

ಮಡಿವಾಳ ಸಂದ ರಾಜ್ಯಾಧ್ಯಕ್ಷ ಟಿ.ಆರ್.ಪ್ರಕಾಶ್, ಬಿಜೆಪಿ ಮುಖಂಡ ಹೊಸಹಳ್ಳಿ ನಾಗೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್ ವಿಶ್ವಕರ್ಮ, ಕೆ.ಆರ್.ಪೇಟೆ ತಾಲೂಕು ಮಡಿವಾಳ ಸಂದ ಅಧ್ಯಕ್ಷ ಸಿದ್ದೇಶ್, ಕೆಪಿಸಿಸಿ ಒಬಿಸಿ ರಾಜ್ಯಕಾರ್ಯದರ್ಶಿ ವಕೀಲ ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net