ಸಂಘಟನೆಗೊಂಡ ಸೌಲಭ್ಯ ಪಡೆದುಕೊಳ್ಳಿ: ಗ್ರಾಪಂ ಮಾಜಿ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಕಿವಿಮಾತು

Prathiba
Published on

ಮಂಡ್ಯ: ಕಟ್ಟಡ ಕಾರ್ಮಿಕರು ಸಂಟನೆಗೊಂಡು ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಬೇಕಿದೆ ಎಂದು ಬಸರಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಜೆಡಿಎಸ್ ಮುಖಂಡ ಮಹಾಲಿಂಗೇಗೌಡ ಮುದ್ಧನಟ್ಟ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಸುರಕ್ಷಾ ಕಟ್ಟಡ ಮತ್ತು ಅಸಂಟಿತ ಕಾರ್ಮಿಕರ ಸಂ ಜಿಲ್ಲಾಶಾಖೆಯಿಂದ ಭಾನುವಾರ ಆಯೋಜಿಸಿದ್ದ ಬೃಹತ್ ಕಟ್ಟಡ ಕಾರ್ಮಿಕರ ಸವಾವೇಶ ಮತ್ತು ಕಾರ್ಮಿಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸವಾರಂಭದಲ್ಲಿ ವಾತನಾಡಿದರು.
ಕಾರ್ಮಿಕರ ಚಳವಳಿಗೆ ಐತಿಹ್ಯವಿದೆ. ಆದರೂ ಇಂದಿಗೂ ಅವರ ಮೇಲೆ ಶೋಷಣೆ, ದೌರ್ಜನ್ಯ ನಡೆಯುತ್ತಿದೆ. ಕಾರ್ಮಿಕರ ಕಲ್ಯಾಣವಾಗದೆ ದೇಶ ಅಭಿವೃದ್ಧಿ ಶೂನ್ಯ. ದೇಶದ ಆರ್ಥಿಕ ಬಲವೇ ಕೂಲಿಕಾರರ ದುಡಿಮೆ ಮತ್ತು ಉಳಿತಾಯದ ಮೇಲೆ ನಿಂತಿದೆ. ಭಾರತ ಬಹುಪಾಲು ಕಾರ್ಮಿಕರನ್ನೊಳಗೊಂಡ ದೇಶ. ದುಡಿಮೆ ನಂಬಿ ಬದುಕುವ ಜೀವಗಳು ಕೋಟಿ ಇವೆ. ಆದರೆ ಬಂಡವಾಳಶಾಹಿಗಳ ಹಿಡಿತದಲ್ಲಿ ಕಾರ್ಮಿಕರ ಬದುಕು ದುಸ್ಥರಗೊಳ್ಳುತ್ತಿದೆ ಎಂದು ಎಚ್ಚರಿಸಿದ ಅವರು, ಕಾರ್ಮಿಕ ಇಲಾಖೆಯಿಂದ ಸಿಗುವ ಅನೇಕ ಸೌಲಭ್ಯಗಳನ್ನು ಪಡೆಯಲು ನೋಂದಣಿ ವಾಡಿಸಿ. ಜತೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ. ಇನ್ನು ಪ್ರತಿಭಾವಂತ ವಿದ್ಯಾರ್ಥಿಗಳ ಆರ್ಥಿಕ ನೆರವಿಗೆ ನಮ್ಮ ಟ್ರಸ್ಟ್‌ನಿಂದ ಸಹಾಯ ಪಡೆಯಬಹುದು ಎಂದು ತಿಳಿಸಿದರು.
ಜ್ಯೋತಿಷ್ಯತಜ್ಞ ಡಾ.ಮಹರ್ಷಿ ಆನಂದ್ ಗುರೂಜಿ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಬಿಜೆಪಿ ಮುಖಂಡ ಆರ್.ಎಸ್.ರಾಜು, ಸಂದ ರಾಜ್ಯಾಧ್ಯಕ್ಷ ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net