ಗುರಿ ಇಲ್ಲದಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ: ಎಸ್.ಶಂಕರ್ ರಾವ್ ಅಭಿಮತ

Tulasi-2 (7)
Published on

ಮಂಡ್ಯ: ಮನುಷ್ಯನಿಗೆ ಮುಖ್ಯವಾಗಿ ಗುರಿ ಇರಬೇಕು. ಸರಿಯಾದ ಗುರಿ ಇಲ್ಲದಿದ್ದಲ್ಲಿ ಬದುಕಿನಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಭಾವಸಾರ ಕ್ಷತ್ರಿಯ ಪದವೀಧರ ಸಂಘದ ಮಾಜಿ ಅಧ್ಯಕ್ಷ ಎಸ್.ಶಂಕರ್‌ರಾವ್ ಅಂಚಳ್‌ಕರ್ ತಿಳಿಸಿದರು.
ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಕ್ಷತ್ರಿಯ ವಿದ್ಯಾಭಿವೃದ್ಧಿ ಸಮಿತಿ ವತಿಯಿಂದ ನಗರದ ವಿಠಲ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಗುರಿ ಸಾಧಿಸಲು ಸರಿಯಾದ ಗುರು ಇರಬೇಕು. ಸಮರ್ಥ ಗುರುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾವಸಾರ ಕ್ಷತ್ರಿಯ ಸಮುದಾಯ ೨ಎಗೆ ಸೇರ್ಪಡೆಯಾಗಿದೆ. ಇದನ್ನು ತಿಳಿಯದ ಸಮುದಾಯದ ಕೆಲವರು ಮರಾಠ ಎಂದು ನಮೂದಿಸಿ ಸಂಕಷ್ಟಪಡುತ್ತಾರೆ. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಕ್ಕೆ ೨ಎ ತುಂಬ ಉಪಯುಕ್ತವಾದದ್ದು. ಯಾರೂ ಸಹ ಶಾಲಾ ದಾಖಲಾತಿಗಳು, ಸರ್ಕಾರದ ಅರ್ಜಿಗಳಲ್ಲಿ ಮರಾಠ ಎಂದು ನಮೂದಿಸಬಾರದು. ಒಂದು ವೇಳೆ ಶಾಲಾ ದಾಖಲಾತಿಗಳಲ್ಲಿ ನಮೂದಿಸಿದ್ದರೆ ಈಗಲೇ ಅದನ್ನು ತೆಗೆಸಿ ೨ಎ ಎಂದು ನಮೂದಿಸುವಂತೆ ಕಿವಿಮಾತು ಹೇಳಿದರು.
ಉಪನ್ಯಾಸಕ ಅನಿಲ್‌ಕುಮಾರ್ ರಂಪೂರೆ, ಡಾ.ಶರತ್ ಬಾಂಬೋರೆ, ಭಾವಸಾರ ಕ್ಷತ್ರಿಯ ಸಮಾಜದ ಜಿಲ್ಲಾಧ್ಯಕ್ಷ ನಾಮ್‌ದೇವ್ ಎನ್. ರೇಳೇಗರ್, ಕಾರ್ಯದರ್ಶಿ ಕೆ.ಟಿ.ಶಶಿಕುಮಾರ್ ಇತರರಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net