ಪ್ರತಿಭಾ ಕಾರಂಜಿಯಿಂದ ಮಕ್ಕಳ ಪ್ರತಿಭೆಗೆ ಮರುಹುಟ್ಟು: ವಿಷಯ ಪರಿವೀಕ್ಷಕ ಎಸ್.ಲೋಕೇಶ್ ಅಭಿಮತ

prathiba-karanji-
Published on

ಮಂಡ್ಯ: ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಪ್ರತಿಭಾ ಕಾರಂಜಿಯಿಂದ ಮಕ್ಕಳಲ್ಲಿರುವ ಪ್ರತಿಭೆ ಮರು ಹುಟ್ಟು ಪಡೆದುಕೊಳ್ಳುತ್ತದೆ ಎಂದು ಗಣಿತ ವಿಷಯದ ಪರಿವೀಕ್ಷಕ ಎಸ್. ಲೋಕೇಶ್ ಅಭಿಪ್ರಾಯಿಸಿದರು.
ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ನಗರದ ಶ್ರೀ ಲಕ್ಷ್ಮೀ ಜನಾರ್ದನ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು. ಹಲವರು ಹಾಡುತ್ತಾ, ನರ್ತಿಸುತ್ತಾ ಹೆಸರಾಂತ ಕಲಾವಿದರಾಗಿದ್ದಾರೆ. ನಾವು ನಮ್ಮಲ್ಲಿರುವ ಪ್ರತಿಭೆಯನ್ನು ಹೊರಜಗತ್ತಿಗೆ ತೋರ್ಪಡಿಸಿಕೊಳ್ಳುವ ಕೆಲಸ ಮಾಡದಿದ್ದರೆ ಅದು ವ್ಯರ್ಥವಾಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಮಾತನಾಡಿ, ಎರಡು ಮೂರು ವರ್ಷದಿಂದ ಕೋವಿಡ್‌ನ ಕಾರಣದಿಂದಾಗಿ ಯಾವ ಚಟುವಟಿಕೆಗಳೂ ನಡೆಯುತ್ತಿರಲಿಲ್ಲ. ಈಗ ಪ್ರತಿಭೆ ಅನಾವರಣಕ್ಕೆ ಒಳ್ಳೆಯ ಅವಕಾಶ ಬಂದಿದೆ. ಇದನ್ನು ಒಳ್ಳೆಯ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಪ್ರತಿಭೆಯನ್ನು ಅನಾವರಣ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯದರ್ಶಿ ಡಾ.ಗೋಪಾಲಕೃಷ್ಣ ಗುಪ್ತ, ಸದಸ್ಯರಾದ ಹಾಲಹಳ್ಳಿ ಅಶೋಕ್, ಡಿಡಿಪಿಐ ಕಚೇರಿಯ ವಿಜ್ಞಾನ ವಿಷಯದ ಪರಿವೀಕ್ಷಕ ನಂಜರಾಜು, ಮುಖ್ಯ ಶಿಕ್ಷಕಿ ಎಚ್.ವಿ.ಧನಲಕ್ಷ್ಮಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಇ.ಶಿವಣ್ಣ, ಕಾರ್ಯಕ್ರಮದ ಸಂಯೋಜಕ ಶಶಿಧರ್, ಸಹಶಿಕ್ಷಕರಾದ ವಂಸತ, ರೇಖಾ, ಅಂಜಲಿ ಜೋಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net