

ಮಂಡ್ಯ: ಗ್ರಾಮೀಣ ವಿದ್ಯಾರ್ಥಿಗಳು ಸಿಗುವ ಅವಕಾಶ ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕೆಂದು ಬಸರಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಹೇಲಿದರು. ತಾಲೂಕಿನ ಕೀಲಾರ ಗ್ರಾಮದಲ್ಲಿರುವ ಕೆ.ವಿ.ಶಂಕರೇಗೌಡ ಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುರುವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.
ಪ್ರತಿ ವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಅನಾವರಣಗೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರು ಹೆಚ್ಚಿನ ಗಮನಹರಿಸಬೇಕು. ವಿದ್ಯಾರ್ಥಿಗಳು ಸಾಧನೆಯ ಸಂಕಲ್ಪಕೈಗೊಂಡು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಆಸಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತೇಳಿದರು.
ಕೆ.ವಿ.ಶಂಕರೇಗೌಡ ಶಿಕ್ಷಣ ಸಂಸ್ಥೆ ಕೀಲಾರದ ಗೌರಾಧ್ಯಕ್ಷ ವೀರೇಶ್, ಗ್ರಾಪಂ.ಅಧ್ಯಕ್ಷೆ ಪುನೀತಾ, ಶಾಲೆಯ ಕಾರ್ಯದರ್ಶಿ ನವ್ಯಶ್ರೀ, ಉಪಾಧ್ಯಕ್ಷ ನಾಗೇಂದ್ರ, ಧರ್ಮದರ್ಶಿ ಗೌರಮ್ಮ,, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಶಿಧರ್‌ಈಚಗೆರೆ, ಶಿಕ್ಷಕರಾದ ಮಂಜುಳಾ, ಶ್ರೀಧರ್, ಸುಜಾತಾ, ಉಮಾದೇವಿ ಇತರರಿದ್ದರು.